ಸಮಿತಿಯು ಕರಾವಳಿಯ ಭವಿಷ್ಯದ ಅಭಿವೃದ್ದಿಗೆ ಪೂರಕವಾಗಿದೆ – ಸ್ಪೀಕರ್ ಯು. ಟಿ. ಖಾದರ್
ಮುಂಬಯಿ: ಇವತ್ತು ಕೆಲವು ವಿಶೇಷ ಹಬ್ಬಗಳ ದಿನವಾಗಿದ್ದರೂ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರೊಂದಿಗೆ ನೀವೆಲ್ಲರೂ ಸೇರಿ ನಮ್ಮ ಕರಾವಳಿ ಜಿಲ್ಲೆಗಳ ಹಾಗೂ ನನ್ನ ಮೇಲಿನ ಪ್ರೀತಿ ವಿಶ್ವಾಸ ಇಂದಿನ ಬಿಡುವಿಲ್ಲದ ಸಮಯವು ನನ್ನನ್ನು ಈ ಕಾರ್ಯಕ್ರಮಕ್ಕೆ ಬರುವಂತೆ ಮಾಡಿದೆ. ಕಳೆದ 25ವರ್ಷಗಳಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಯು ಸಮಾಜಿಕವಾಗಿಯೂ, ಅಭಿವೃದ್ದಿಯ ದೃಷ್ಟಿಯಿಂದ ಜಿಲ್ಲೆಗಳಲ್ಲಿ ಪರಿಸರವನ್ನು ಉಳಿಸುವ ಮುಖಾಂತರ ಸಮಿತಿಯು ಕರಾವಳಿಯ ಅಭಿವೃದ್ದಿಗೆ ಪೂರಕವಾಗಿದೆ ಎಂದು ಕರ್ನಾಟಕ ಸರಕಾರದ ಮಾನ್ಯ ಸ್ವೀಕರ್ ಯು. ಟಿ. ಖಾದರ್ ನುಡಿದರು.

ಸೆ. 5, ರಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ, ಸಮಾರಂಭವು ಸಾಕೀನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್, ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಇವರ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರಗಿದ್ದು ಸಮಾರಂಭಕ್ಕೆ ಚಾಲನೆಯಿತ್ತು ಮಾತನಾಡಿದ ಅವರು ವಿಶ್ವಮಟ್ಟದ ಸಂಸ್ಕೃತಿಯನ್ನು ನಾವೂ ಬಾರತ ದೇಶದಲ್ಲಿ ಮಾತ್ರ ಕಾಣಬಹುದು, ಭಾರತದ ಸಂಸ್ಕೃತಿಯನ್ನು ಕರ್ನಾಟಕದಲ್ಲಿ, ಕರ್ನಾಟಕದ ಸಂಸ್ಕೃತಿಯನ್ನು ದಕ್ಷಿಣ ಕನ್ನಡ ಜಿಲ್ಲೆ, ತುಳುನಾಡಲ್ಲಿ, ತುಳುನಾಡಿನ ಸಂಸ್ಕೃತಿಯನ್ನು ನಾವು ಮುಂಬಯಿಯ ಇಂತಹ ಕಾರ್ಯಕ್ರಮಗಳಲ್ಲಿ ಕಾಣಬಹುದು. ಸಮಿತಿಯ ಕಳೆದ 25 ವರ್ಷಗಳಿಂದ ಪರಿಸರಕ್ಕೆ ಸಮಂದಿಸಿದ ಪ್ರಯಾಣಕ್ಕೆ ಸಾಕ್ಷಿಯಾಗಿ ನಾನಿಲ್ಲಿ ಬಂದು ನಿಂತಿರುವೆನು. ಸಮಿತಿಯು ಪ್ರದೇಶದ ಪರಿಸರ ಹಾಳಾಗದ ರೀತಿಯಲ್ಲಿ ಭವಿಷ್ಯದ ನಮ್ಮ ಜನರಿಗೆ ಬೇಕಾದ ಅಭಿವೃದ್ದಿಯನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುದರ ಮೂಲಕ ನಮ್ಮ ಜಿಲ್ಲೆಗಳ ಅಭಿವೃದ್ದಿಯ ಬಗ್ಗೆ ಕ್ರೀಯಾಶೀಲವಾಗಿದೆ. ಮುಂದಿನ ನೂರು ವರ್ಷಗಳ ಅಭಿವೃದ್ದಿಯ ಬಗ್ಗೆ ಸಮಿತಿಯು ವರದಿಯನ್ನು ನೀಡಿದ್ದು ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ನನ್ನನ್ನು ಎಲ್ಲಿ ಸಿಕ್ಕಿದರೂ ಸಮಾಜದ ಬಗ್ಗೆ, ಜಿಲ್ಲೆಯ ಭವಿಷ್ಯದ ಅಭಿವೃದ್ದಿಯ ಚಿಂತೆ ವ್ಯಕ್ತಪಡಿಸುತ್ತಿದ್ದು ಇದಕ್ಕೆ ಸ್ಪಂದಿಸಬೇಕಾದದ್ದು ನನ್ನ ಕರ್ತ್ಯವ್ಯ. ಈ ಬಗ್ಗೆ ಸಮಿತಿಯ ಸದಸ್ಯರೊಂದಿಗೆ ಸೂಕ್ತ ಸಭೆ ನಡೆಸಲಿದ್ದೇವೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಜಿಲ್ಲೆಗಳ ಅಭಿವೃದ್ಧಿಯೊಂದಿಗೆ ಎಲ್ಲಾ ಜಾತಿ ಮತ ಧರ್ಮದವರನ್ನು ಒಗ್ಗೂಡಿಸಿ ಸಾಮರಸ್ಯವನ್ನು ನಿರ್ಮಾಣ ಮಾಡುತ್ತಿದ್ದು ಇದು ರಾಜ್ಯಕ್ಕೆ ಮಾತ್ರವಲ್ಲ ನಮ್ಮ ದೇಶಕ್ಕೂ ಅತೀ ಅಗತ್ಯ. ಜಿಲ್ಲೆಗಳ ಅಭಿವೃದ್ದಿಯು ಕೇವಲ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಮಾತ್ರವಲ್ಲ ನಮ್ಮ ಒಗ್ಗಟ್ಟು ಅತೀ ಮುಖ್ಯ. ಎಲ್ಲಾ ಸಮುದಾಯದ, ಎಲ್ಲಾ ಮತಗಳ, ಬಡ ಹಾಗೂ ಶ್ರೀಮಂತ ಮಕ್ಕಳು ಒಂದಾಗಿ ಸಹೋದರತ್ವದಿಂದ ಇರುವುದರಿಂದ ಪರಿಸರವು ತನ್ನಿಂದ ತಾನೇ ಅಭಿವೃದ್ದಿಯಾಗುತ್ತದೆ. ಜಿಲ್ಲೆಗಳಲ್ಲಿ ಸಂವಾದದ ವಾತಾವರಣ ನಿರ್ಮಾಣ ಮಾಡಲು ನೀವು ಎಲ್ಲಾ ಸಂಘ ಸಂಸ್ಥೆಗಳು ಒಟ್ಟಾಗಿ ಸಮಿತಿಯ ಮೂಲಕ, ಕಷ್ಟವಾದರೂ ಅದರ ನೇತೃತ್ವ ವಹಿಸಬೇಕು. ದೇವರು ಎಲ್ಲಾ ಮನುಷ್ಯನಿಗೆ ಒಂದೇ ರೀತಿಯ ಆಕಾರವನ್ನು ನೀಡಿದ್ದಾರೆ. ಜಾತೀ ಮತವನ್ನು ನೋಡದೆ ಅಸಾಯಕರ ಕಣ್ಣೀರೊರಸುವ ಕಾರ್ಯ ಆಗಬೇಕು. ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತಾ ಇತರ ಧರ್ಮವನ್ನು ಗೌರವಿಸುವ ಕಾರ್ಯ ನಮ್ಮದಾಗಲಿ. ಜಿಲ್ಲೆಗಳ ಅಭಿವೃದ್ದಿಗೆ ಯಾವುದೇ ಟೀಕೆ ಟಿಪ್ಪಣಿಗಳನ್ನು ಲೆಕ್ಕಿಸದೆ ಇಲ್ಲಿನ ಎಲ್ಲಾ ಜಾತೀಯ ಸಂಘಟನೆಗಳ ದೊಡ್ಡ ಮಟ್ಟದ ನೇತೃತ್ವ ಅತೀ ಅಗತ್ಯ ಎಂದರು.
ಶ್ರೀ ದಿಗಂಬರ ಜೈನ ಮಠ, ಮೂಡಬಿದಿರೆ, ದ.ಕ., ಇದರ ಜಗದ್ಗುರು ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವಾರ್ಯ ಮಹಾಸ್ವಾಮಿಜಿ ಯವರು ಆಶೀರ್ವಚನ ನೀಡುತ್ತಾ ನಮ್ಮ ತುಳುನಾಡು ಮಿನಿ ಭಾರತದಂತೆ, ನೀವು ಕೇವಲ ಒಬ್ಬರೇ ಅಲ್ಲ, ಇಂದು 25 ಸಮುದಾಯಗಳನ್ನು ಗುರುತಿಸಿ ಸನ್ಮಾನಿಸಿದ್ದು ನಿಜಕ್ಕೂ ಪ್ರಶಂಸನೀಯ. ನಿಮ್ಮೆಲ್ಲರಿಂದಾಗಿ ನಮ್ಮ ಜಿಲ್ಲೆ ಬೆಳಗುತ್ತಿದೆ. ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಜೈನ ಮೂಲದ ಬಗ್ಗು ಚೌಟ, ಬಾಲು ಚೌಟ ಮೂಲದ ಜೈನ ಮನೆತನದಲ್ಲಿ ಹುಟ್ಟಿದವರು. ರಾಜಕೀಯ ಮಾಡಲು ಬಾರದೆ ಇದ್ದರು ರಾಜಕೀಯದವರನ್ನು ಒಳ್ಳೆಯದು ಮಾಡಲು ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರಿಂದ ಮಾತ್ರ ಸಾಧ್ಯ. ಸರ್ವಧರ್ಮ ಸಮನ್ವಯವನ್ನು ಸಾರಿದ ಕೀರ್ತಿ ಸ್ಪೀಕರ್ ಯು. ಟಿ. ಖಾದರ್ ಅವರಿಗೆ ಸಲ್ಲುತ್ತದೆ. ಇದು ಶಿಕ್ಷಕರ ದಿನ. ಜಯಕೃಷ್ಣ ಶೆಟ್ಟಿಯವರ ತಂದೆಯವರು ಶಿಕ್ಷಕರಾಗಿದ್ದು ಅದನ್ನು ನೆನಪಲ್ಲಿಟ್ಟುಕೊಂಡು ಇಂದು ನನ್ನನ್ನು ಇಂದು ಕರೆದಿದ್ದೀರಿ. ಸಮಿತಿಯ 25 ವರ್ಷಗಳ ಜೀವನದಲ್ಲಿ ತಮಗಾಗಿ ಏನು ಮಾಡದೆ ಸಮಾಜದವರ ಕಣ್ಣೊರೆಸುವ ಕಾರ್ಯವನ್ನು ಮಾಡಿದ್ದೀರಿ. ನಮ್ಮ ದೇಶದ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ಹಾಗೂ ಉದ್ಯೋಗವನ್ನು ಒದಗಿಸುವ ಕಾರ್ಯ ಸಮಿತಿಯಿಂದ ಆಗುತ್ತಿದೆ. ಒಳ್ಳೆಯ ಮನಸ್ಸಿದ್ದಲ್ಲಿ ಇಂತಹ ಕಾರ್ಯ ಸಾಧ್ಯ. ನಿರ್ಮಲವಾದ ಮನಸ್ಸು ಆರೋಗ್ಯಕ್ಕೂ ಒಳ್ಳೆಯದು. ಇಂದು ಎಲ್ಲರೂ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರನ್ನು ಅವರ ಕಾರ್ಯವನ್ನು ಗುರುತಿಸಿ ಪ್ರಶಂಸೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಗಳಿಗೆ ಮುಂಬಯಿಗರ ಕೊಡುಗೆ ಅಪಾರ. ಹಿಂದೆ ಮುಂಬಯಿಯ ಸೇಠ್ ಗಳ ಹಣ ನಮ್ಮ ಜಿಲ್ಲೆಯವರನ್ನು ಬದುಕಿಸಿದೆ. ಸಮಿತಿಯ ಇವತ್ತಿನ ಬೆಳ್ಳಿ ಹಬ್ಬದ ಕಾರ್ಯಕ್ರಮ ಎಲ್ಲರಿಗೂ ಆನಂದ, ಶ್ರದ್ಧೆ ಮತ್ತು ಸಮರ್ಪಣೆಯಿಂದ ಕೂಡಿರಲಿ,” ಎಂದು ಶುಭ ಹಾರೈಸಿದರು.
ಸಮಿತಿಯ 25 ನೆಯ ಸಂಸ್ಥಾಪನಾ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಮುಂಬಯಿಯ 25 ಜಾತೀಯ ಸಂಘಟನೆಗಳನ್ನು, ಅದರ ಅಧ್ಯಕ್ಷರುಗಳನ್ನು / ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸಮಿತಿಯ ಪರವಾಗಿ ವಿಶೇಷವಾಗಿ ಸನ್ಮಾನಿಸಿದರು.
ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ದಿಕ್ಸೂಚಿ ಬಾಷಣ ಮಾಡಿದರು. ಉಪಾಧ್ಯಕ್ಷ ಸಿಎ. ಐ. ಆರ್. ಶೆಟ್ಟಿಯವರು ಎಲ್ಲರನ್ನೂ ಸ್ವಾಗತಿಸಿದರು.
ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಯ ಉಪಾಧ್ಯಕ್ಷರುಗಳಾದ ಪಿ. ಧನಂಜಯ ಶೆಟ್ಟಿ, ಜಗದೀಶ್ ಅಧಿಕಾರಿ, ಚಂದ್ರಶೇಖರ ಆರ್. ಬೆಲ್ಚಡ, ನ್ಯಾ. ಆರ್. ಎಂ. ಭಂಡಾರಿ, ಜಿತೇಂದ್ರ ಗೌಡ, ನ್ಯಾ. ಶಶಿಧರ್ ಯು. ಕಾಪು, ಡಾ. ಆರ್. ಕೆ. ಶೆಟ್ಟಿ, ತೋನ್ಸೆ ಡಾ. ವಿಜಯಕುಮಾರ್ ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ಶ್ರೀನಿವಾಸ್ ಸಾಫಲ್ಯ, ಗಿರೀಶ್ ಬಿ. ಸಾಲಿಯಾನ್, ಗೌರವ ಕಾರ್ಯದರ್ಶಿಗಳಾದ ಸಿ.ಎಸ್. ಗಣೇಶ್ ಶೆಟ್ಟಿ, ಹ್ಯಾರಿ ಸಿಕ್ವೇರಾ, ಗೌರವ ಜೊತೆ ಕೊಶಾಧಿಕಾರಿಗಳಾದ ತೋನ್ಸೆ ಸಂಜೀವ ಪೂಜಾರಿ, ಮಹೇಶ್ ಕಾರ್ಕಳ, ಸಮಿತಿಯ ಮಾಜಿ ಅಧ್ಯಕ್ಷ ಧರ್ಮಪಾಲ ದೇವಾಡಿಗ , ಸಲಹೆಗಾರರಾದ ಪ್ರವೀಣ್ ಭೋಜ ಶೆಟ್ಟಿ, ಬಿ. ರಮಾನಂದ ರಾವ್, ಸೂರ್ಯಕಾಂತ್ ಜಯ ಸುವರ್ಣ, ವಿಲ್ಸನ್ ಫೆರ್ನಾಂಡಿಸ್, ಲಕ್ಷ್ಮಣ ಸಿ. ಪೂಜಾರಿ, ಸದಸ್ಯರುಗಳಾದ , ಜಯಂತ್ ಕೆ. ಶೆಟ್ಟಿ, ರವಿ ದೇವಾಡಿಗ, ನ್ಯಾ. ಗುಣಕರ ಶೆಟ್ಟಿ, ವಾಸು ದೇವಾಡಿಗ, ಕಿಶೋರ್ ಕುಮಾರ್ ಕುತ್ತ್ಯಾರ್, ಸಂತೋಷ್ ರೈ ಬೆಳ್ಳಿಪಾಡಿ, ತೋನ್ಸೆ ಅಶೋಕ್ ಎಸ್. ಶೆಟ್ಟಿ, ಜನಾರ್ಧನ ದೇವಾಡಿಗ, ರವಿರಾಜ್ ಕಲ್ಯಾಣಪುರ, ಪದ್ಮನಾಭ ಸಸಿಹಿತ್ಲು, ಡಾ. ಪ್ರಭಾಕರ್ ಶೆಟ್ಟಿ ಬೋಳ, ಉದಯ ಅಧಿಕಾರಿ, ನ್ಯಾ. ದಯಾನಂದ ಶೆಟ್ಟಿ, ಉತ್ತಮ್ ಶೆಟ್ಟಿಗಾರ್, ಕೃಷ್ಣಕುಮಾರ್ ಎನ್. ಬಂಗೇರ, ದಿವಾಕರ್ ಶೆಟ್ಟಿ ಪೋಸ್ರಾಲ್, ಪ್ರಕಾಶ್ ಶೆಟ್ಟಿ ಸುರತ್ಕಲ್, ನ್ಯಾ. ಮೋರ್ಲಾ ರತ್ನಾಕರ್ ಶೆಟ್ಟಿ, ಲೋಕನಾಥ್ ಎಂ. ಪೂಜಾರಿ, ರಾಮಚಂದ್ರ ಗಣಿಗ ಎಂ. ಎನ್. ಕಾರ್ಕೇರ, ನ್ಯಾ. ಸಂತೋಷ್ ಕುಮಾರ್ ಹೆಗ್ಡೆ, ಕರುಣಾಕರ ಹೇಜ್ಮಾಡಿ, ಪದ್ಮನಾಭ ಪೂಜಾರಿ, ಬಾಲಕೃಷ್ಣ ಪಿ. ಭಂಡಾರಿ, ಗಂಗಾಧರ್ ಎನ್. ಗೌಡ, ವಿಶ್ವನಾಥ ಹೆಗ್ಡೆ, ನ್ಯಾ. ರವಿ ಕೋಟ್ಯಾನ್, ಧನಂಜಯ ಅಧಿಕಾರಿ, ರಾಮಣ್ಣ ದೇವಾಡಿಗ ಮೊದಲಾದವರು ಸಹಕರಿಸಿದರು
ವೇದಿಕೆಯಲ್ಲಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲಿಯಾನ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ ಸಮಿತಿಯ ಗೌರವ ಕೋಶಾಧಿಕಾರಿ ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ ಉಪಸ್ಥಿತರಿದ್ದರು.
ಸಮಿತಿಯ ವಕ್ತಾರ ದಯಾಸಾಗರ ಚೌಟ ಅವರು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ದೇವದಾಸ್ ಕುಲಾಲ್ ವಂದನಾರ್ಪಣೆ ಮಾಡಿದರು.
ಸಮಿತಿಯು ಮುಂದೆ ಉನ್ನತ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದೆ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ
ಕಳೆದ 25 ವರ್ಷಗಳಿಂದ ನಮ್ಮ ಜಿಲ್ಲೆಗಳ ಹಲವಾರು ಗಣ್ಯ ವ್ಯಕ್ತಿಗಳ, ರಾಜಕಾರಿಣಿಗಳ ಸಹಾಯ ಹಾಗೂ ಪ್ರೋತ್ಸಾಹದಿಂದ ನಮ್ಮ ಸಮಿತಿಯು ಜಿಲ್ಲೆಗಳ ಅಭಿವೃದ್ದಿಗಾಗಿ ಹಮ್ಮಿಕೊಂಡ ಎಲ್ಲಾ ಕಾರ್ಯವನ್ನು ಸರಕಾರದ ಮೂಲಕ ಯಶಸ್ವಿಯಾಗಿ ಪೂರೈಸಿದ್ದೇವೆ. ಈ ಬಗ್ಗೆ ಜಾರ್ಜ್ ಫೆರ್ನಾಂಡೀಸ್ ರವರ ಕೊಡುಗೆ ಅಪಾರ. ಇಂದು ನಮ್ಮೊಂದಿಗೆ ಅನುಭವೀ ಅಧ್ಯಕ್ಷರಿದ್ದು ನಮ್ಮ ಮುಂದಿನ ಎಲ್ಲಾ ಯೋಜನೆಗಳು ಉನ್ನತ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುವಲ್ಲಿ ಸಂದೇಹವಿಲ್ಲ. ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ ಬಗ್ಗೆ ನಾವು ಈಗಾಗಲೇ ಪತ್ರಿಕಾಗೋಷ್ಠಿಯನ್ನು ಮಾಡಿದ್ದೇವೆ. ನಮಗೆ ಜಿಲ್ಲೆಗಳ ಅಭಿವೃದ್ದಿ ಅಗತ್ಯ. ಕರ್ನಾಟಕದ ಏಕೈಕ ಬಂದರು ಮಂಗಳೂರಲ್ಲಿದ್ದು ಜಿಲ್ಲೆ ಬೆಳೆಯಲು ತುಂಬಾ ಅವಕಾಶವಿದೆ. ಎಲ್ಲರೂ ಸೇರಿ ಜಿಲ್ಲೆಗಳಲ್ಲಿ ಸಾಮರಸ್ಯದ ವಾತಾವರಣ ನಿರ್ಮಿಸೋಣ. ಧರ್ಮಸ್ಥಳಕ್ಕೆ ಸರ್ವ ಮತೀಯರು ಬೇಟಿಯಿತ್ತು ಪ್ರಸಾದ ಸ್ವೀಕರಿಸುತ್ತಿದ್ದು, ಈ ಶ್ರದ್ದಾ ಕೇಂದ್ರಕ್ಕೆ ಯಾವುದೇ ರೀತಿಯಲ್ಲಿ ದಕ್ಕೆಯಾಗದಿರಲಿ. ಈ ಬಗ್ಗೆ ನಾವು ಡಾ. ವೀರೇಂದ್ರ ಹೆಗ್ಡೆಯವರನ್ನು ಬೇಟಿಯಾಗಿದ್ದೇವೆ. ಈ ಬಗ್ಗೆ ಸರಕಾರವು ಸೂಕ್ತ ಕ್ರಮವನ್ನು ಕೈಕೊಂಡದ್ದು ಅಭಿನಂದನೀಯ ಇಂದು ಇಡೀ ಜಗತ್ತೇ ಧರ್ಮದ ಆಧಾರದಲ್ಲಿ ನಿಂತಿದೆ. ನಮ್ಮ ಮುಂದಿನ ನೂರು ವರ್ಷಗಳ ಯೋಜನೆಯ ಬಗ್ಗೆ ಮಾನ್ಯ ಯು. ಟಿ. ಖಾದರ್ ಅವರಿಗೆ ಹಸ್ತಾಂತರಿಸಿದ್ದು ಅದರ ಕೆಲಸ ಮುಂದುವರಿಯುತ್ತಿದ್ದು ಆದಷ್ಟು ಬೇಗನೇ ಕಾರ್ಯರೂಪಕ್ಕೆ ತರುವಂತೆ ಸ್ಪೀಕರ್ ರವರನ್ನು ಒತ್ತಾಯಿಸುತ್ತಾ ನಮ್ಮೆಲ್ಲರ ಜೀವನವನ್ನು ಸಾರ್ಥಕಗೊಳಿಸಬೇಕಾಗಿ ವಿನಂತಿಸಿದರು.
ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಸ್ಪೂರ್ತಿ ಸಮಿತಿಯ ಅಭಿವೃದ್ದಿಗೆ ಪ್ರೇರಣೆಯಾಗಿದೆ. ಇದರಿಂದಾಗಿ ಇಲ್ಲಿನ ಎಲ್ಲಾ ಸಂಘಟನೆಗಳು ಒಗ್ಗಟ್ಟಿನಲ್ಲಿ ಜಿಲ್ಲೆಗಳ ಅಭಿವೃದ್ದಿಗಾಗಿ ದುಡಿಯುತ್ತಿದೆ. ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಒರ್ವ ಪ್ರಶಸ್ತಿ ವಿಜೇತ ಶಿಕ್ಷಕನ ಪುತ್ರನಾಗಿದ್ದು, ಅವರ ತಂದೆ ಒರ್ವ ಆದರ್ಶ ಪುತ್ರನನ್ನು ಸಮಾಜಕ್ಕೆ ನೀಡಿದ್ದಾರೆ. ಅವರು ಇಟ್ಟ ಹೆಚ್ಚಿಯಿಂದ ಹಿಂದಕ್ಕೆ ಸರಿಯಲಿಲ್ಲ. ಜೋರ್ಜ್ ಫೆರ್ನಾಂಡಿಸ್ ಅವರ ಆಶ್ರಿರ್ವಾದದಿಂದ ನಾವು ಮುಂದುವರಿಯುತ್ತಿದ್ದೇವೆ. ಆರಂಭದಲ್ಲಿ ಸಮಿತಿಯಲ್ಲಿದ್ದು ಇಂದು ನಮ್ಮೊಂದಿಗೆ ಇಲ್ಲದವರನ್ನು ನಾವು ಸ್ಮರಿಸಬೇಕಾಗಿದೆ. ನಾವು ಎಲ್ಲಾ ಸಮಾಜದವರು ಒಂದಾಗಿ ಊರಿಗೆ ತೆರಳಿ ಸೌಹಾರ್ಧತೆಯ ಸಭೆಯನ್ನು ನಡೆಸೋಣ. ನಾವೂ ಒಗ್ಗಟ್ಟಾಗಿ ಮುಂದುವರಿದಲ್ಲಿ ಖಂಡಿತವಾಗಿಯೂ ನಮ್ಮ ಎಲ್ಲಾ ಕಾರ್ಯದಲ್ಲಿ ಮುಂದೆಯೂ ಯಶಸ್ಸನ್ನು ಪಡೆಯುದರಲ್ಲಿ ಸಂದೇಹವಿಲ್ಲ. ಈಗಾಗಲೇ ಮಾನ್ಯ ಯು. ಟಿ. ಖಾದರ್ ರವರು ನಮ್ಮ ಮುಂದಿನ ನೂರು ವರ್ಷದ ಯೋಜನೆಗೆ ಸ್ಪಂದಿಸಿದ್ದು ಈ ಬಗ್ಗೆ ಮುಂದುವರಿಯಲು ನಮ್ಮನ್ನು ಆಮಂತ್ರಿಸಿದ್ದು ಅಭಿನಂದನೀಯ.- ನಿತ್ಯಾನಂದ ಡಿ. ಕೋಟ್ಯಾನ್, ಅಧ್ಯಕ್ಷರು, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (NGO)
ದೇಶದಲ್ಲಿ ಜಾತಿ ಮತವನ್ನು ಮೀರಿದ ಒಂದೇ ಒಂದು ಸಮಿತಿ ಎಂದರೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ. ದೇವರ ಅನುಗ್ರಹದಿಂದ ಈ ಸಮಿತಿಗೆ ಹೆಸರನ್ನು ಇಟ್ಟಿದ್ದು ಸಮಿತಿಯು ಇಟ್ಟ ಎಲ್ಲಾ ಹೆಚ್ಚಿಯು ಯಶಸ್ಸಿಯಾಗಿ ನೆರವೇರುತ್ತಿದೆ. ಎಲ್ಲಾ ಸಮುದಾಯಕ್ಕೆ ಬೇಕಾದ ಕನ್ಯಾನ ಸದಾಶಿವ ಶೆಟ್ಟಿಯವರು ಇಂದು ಇಲ್ಲಿದ್ದು ಮುಂಬಯಿಗರಿಗೆ ಇವರು ನಡೆದಾಡುವ ದೇವರಂತೆ.- ಪ್ರವೀಣ್ ಭೋಜ ಶೆಟ್ಟಿ, ಅಧ್ಯಕ್ಷರು, ಬಂಟರ ಸಂಘ ಮುಂಬಯಿ
ಜಿಲ್ಲೆಗಳಲ್ಲಿ ಹೊಸ ಉದ್ಯಮವನ್ನು ಪ್ರಾರಂಭಿಸಿದಲ್ಲಿ ವಿರೋದಿಗಳು ಅದಕ್ಕೆ ತಡೆಯೊಡ್ಡುತ್ತಿದ್ದು ಕಾರ್ಖಾನೆಯನ್ನು ಮುಚ್ಚುವ ಪ್ರಸಂಗವು ಕೆಲವರಿಗೆ ಆಗಿದೆ. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ನಿಜಕ್ಕೂ ಜಿಲ್ಲೆಗಳಿಗಾಗಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದು ನಾನು ಸಮಿತಿಗೆ ನನ್ನ ಪ್ರೋತ್ಸಾಹವನ್ನು ವ್ಯಕ್ತಪಡಿಸುತ್ತೇನೆ. ಮುಂದೆ ನಾವೆಲ್ಲರೂ ಸೇರಿ ಜಿಲ್ಲೆಗಳ ಅಭಿವೃದ್ದಿಗಾಗಿ ದುಡಿಯೋಣ.- ಕನ್ಯಾನ ಸದಾಶಿವ ಶೆಟ್ಟಿ, ಖ್ಯಾತ ಉದ್ಯಮಿ
ನಾವು ಮಕ್ಕಳಿಗೆ ಆಸ್ತಿ ಮಾಡಿ ಇಡದೆ ಮಕ್ಕಳನ್ನೇ ಆಸ್ತಿಯಾಗಿಸಬೇಕು ಎಂಬ ಮಾತು ಮಾನ್ಯ ಯು. ಟಿ. ಖಾದರ್ ಅವರಿಗೆ ಅನ್ವಯಿಸುತ್ತಿದೆ. ನಮ್ಮ ಸಮಿತಿಯು ಪರಿಸರವಾದಿಗಳ ವಿರುದ್ದ ಹುಟ್ಟಿದೆ. ಸಮಿತಿ ಸ್ಥಾಪನೆ ಸಂದರ್ಭದಲ್ಲಿ ವಿವಿಧ ಸಮುದಾಯದ ಅನೇಕ ಹಿರಿಯರು ನಮಗೆ ಸಹಕರಿಸಿದ್ದು ಅವರನ್ನು ನೆನಪಿಸಬೇಕಾಗಿದೆ. ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ ಜಿಲ್ಲೆಗಳ ಅಭಿವೃದ್ದಿಗಾಗಿ ದುಡಿಯೋಣ.– ಕೆ. ಪಿ. ಜಗದೀಶ ಅಧಿಕಾರಿ, ಸಮಿತಿಯ ರಾಜ್ಯ ಸಂಯೋಜಕರು.
ಚಿತ್ರ / ವರದಿ : ಈಶ್ವರ ಎಂ. ಐಲ್
ಚಿತ್ರ : ಭಾಸ್ಕರ ಕಾಂಚನ್
Comments are closed.