ಯುಎಇ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ, 11ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ರವಿವಾರ, ಆಗಸ್ಟ್ 31 ರಂದು ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6ರ ತನಕ ನಡೆಯಲಿರುವುದು.
ಕಾರ್ಯಕ್ರಮವು ಬೆಳಿಗ್ಗೆ 7.00 ಘಂಟೆಗೆ ಸರಿಯಾಗಿ ಗಣಹೋಮದಿಂದ ತೊಡಗಿ, ಘಂಟೆಗೆ 9.00ಕ್ಕೆ ಮೂರ್ತಿ ಪ್ರತಿಷ್ಠಾಪನೆ ನಡೆಸಲಾಗುವುದು. ತದ ನಂತರ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುದು.
ಮಧ್ಯಾನ ಮಹಾ ಪೂಜೆ ಹಾಗೂ ಅನ್ನದಾನ ನಡೆಯಲಿರುವುದು. ಅದೇ ಸಮಯ ಹಲವು ಕನ್ನಡ ಪರ ಸಂಘಟನೆಗಳಿಂದ ಹಾಗೂ ತಾಯಿನಾಡಿನಿಂದ ಬಂದು ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ವಿಶೇಷ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.
ಮೇಲ್ಕಂಡ ಕಾರ್ಯಕ್ರಮದ ಪ್ರಯುಕ್ತ ಜೂನ್ 1 ರಂದು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ, ಮುಖ್ಯ ಅತಿಥಿಗಳಾಗಿ ಪುರೋಹಿತರಾದ ರಾಜೇಶ್ ಅಡಿಗ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ ಹಾಗೂ ರಾಮ ಕ್ಷತ್ರಿಯ ಸಂಘದ ಉಪಾಧ್ಯಕ್ಷರಾದ ಉದಯ್ ಹೆಗ್ಡೆಯವರು ಭಾಗವಹಿಸಿದ್ದರು.
ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಮಹೇಶ್ ಚಂದ್ರಗಿರಿ, ಉಪಾಧ್ಯಕ್ಷರಾದ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಸುನಿಲ್ ರಾವ್, ಸಂಚಾಲಕರಾದ ಸುಗಂಧರಾಜ ಬೇಕಲ್ ಖಜಾಂಚಿ ರಾಜೇಶ್ ರಾವ್, ಕ್ರೀಡಾ ಕಾರ್ಯದರ್ಶಿ ಸುಬ್ರಮಣ್ಯ, ಜೊತೆ ಕಾರ್ಯದರ್ಶಿ ಬಿಪಿನ್ ಚಂದ್ರ ನಾಯಕ್, ಅಜಿತ್ ಕೊರಕೋಡು, ಅಜಿತ್ ಬೇಕಲ್, ಶ್ರೀ ಸಂದೀಪ್ ರಾವ್, ಸತೀಶ್ ಹಂಗ್ಳೂರು, ರಘುನಾಥ್ ಎಂ, ದಾಮೋದರ ರಾವ್, ಧನಂಜಯ ಸಿ ಹೆಚ್, ದಿನೇಶ್ ಬೇಕಲ್, ಅಶೋಕ್ ಬಾರಿಕಡ್, ಮಹೇಶ್ ಹವಾಲ್ದಾರ್, ನಾಗೇಶ ರಾವ್, ರತ್ನಾಕರ್ ಶೇರೆಗಾರ್, ಹಾಗೂ ಮಹಿಳಾ ವೃಂಧದ ಅಧ್ಯಕ್ಷೆ ಆರುಂಧತಿ ಹವಾಲ್ದಾರ್, ಇವರನ್ನು ಒಳಗೊಂಡ ನೂತನ ಉತ್ಸವ ಸಮಿತಿ ರಚಿಸಲಾಯಿತು.
Comments are closed.