ಉಡುಪಿ: ಹಿಜಾಬ್ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ ಭಾರತ ದೇಶ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಯುಎಇ ರಾಜಕುಮಾರಿ ಇನ್ಸ್ಟಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ರಾಜಕುಮಾರಿ ಹೆಂಡ್ ಬಿಂತ್ ಅಲ್-ಕಾಸಿಮಿ ಹಿಜಾಬ್ ಪರ ಕುಂದಾಪುರದ ಸರಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರ ವಿಚಾರದಲ್ಲಿ ‘ದಿ ಕ್ವಿಂಟ್’ ಬಿತ್ತರಿಸಿದ ವರದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಹೆಂಡ್ ಅಲ್-ಕಾಸಿಮಿ ಶಾರ್ಜಾದ ರಾಜಮನೆತನ ಖಾಸಿಮಿ ಕುಟುಂಬಕ್ಕೆ ಸೇರಿದ್ದು ತಮ್ಮ ಅಧೀಕೃತ ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Comments are closed.