ಕರಾವಳಿ

ಹಿಜಾಬ್ ವಿವಾದ ನಡೆಯುತ್ತಿರುವ ಕುಂದಾಪುರ ಜ್ಯೂನಿಯರ್ ಕಾಲೇಜಿಗೆ ಶನಿವಾರ ರಜೆ..!

Pinterest LinkedIn Tumblr

ಕುಂದಾಪುರ: ಹಿಜಾಬ್ ವಿವಾದ ನಡೆಯುತ್ತಿರುವ ಕುಂದಾಪುರ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಶನಿವಾರ ವಿವೇಚನಾ ರಜೆ ನೀಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಬಸ್ರೂರು ರಥೋತ್ಸವದ ಹಿನ್ನೆಲೆ ಈ ರಜೆ ನೀಡಲಾಗಿದೆ. ಶನಿವಾರ ಎಸ್.ಡಿ.ಎಂ.ಸಿ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ಮೂರು ದಿನಗಳಿಂದ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ನಡೆಯುತ್ತಿದೆ. ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬರುತ್ತಿದ್ದು ಅವರನ್ನು ಗೇಟಿನೊಳಕ್ಕೆ ಬಿಡಲಾಗುತ್ತಿಲ್ಲ. ಶುಕ್ರವಾರವೂ ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು ಗೇಟಿನೊಳಕ್ಕೆ ಬಂದಾಗ ಕಾಲೇಜಿನೊಳಗಿದ್ದ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿದ್ದರು. ಈ ವೇಳೆ ಕಾಲೇಜ್ ಹೊರಭಾಗದಲ್ಲಿ ಕೆಲ ಕಾಲ ಗೊಂದಲದ ಸ್ಥಿತಿ ಕೂಡ ನಿರ್ಮಾಣವಾಗಿತ್ತು.

 

Comments are closed.