Qatar

ಕರ್ನಾಟಕ ಸಂಘ ಕತಾರ್ ವತಿಯಿಂದ ‘ವಿಶ್ವ ಪರಿಸರ ದಿನಾಚರಣೆ

Pinterest LinkedIn Tumblr

ಮಂಗಳೂರು : ಕರ್ನಾಟಕ ಸಂಘ ಕತಾರ್ ವತಿಯಿಂದ ‘ವಿಶ್ವ ಪರಿಸರ ದಿನಾಚರಣೆಯನ್ನು ‘ಗಅಲ್ಫಾರ್ ಅಲ್ ಮಿಸ್ನಾದ್’ ಸಂಸ್ಥೆಯ ನೂತನ ಜೆರ್ಯ್ ಅಲ್ ಸಮೂರ್ ಆವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಬಾಬುರಾಜನ್ ಆಗಮಿಸಿದ್ದರು. ಗೌರವಾನ್ವಿತ ಅತಿಥಿಯಾಗಿ ಶ್ರೀ ಹೇಮಚಂದ್ರನ್ , ಹಿರಿಯ ಪ್ರಧಾನ ವ್ಯವಸ್ಥಾಪಕರು , ಮೂಲ ಸೌಕರ್ಯಗಳ ವಿಭಾಗ, ಗಲ್ಫಾರ್ ಅಲ್ ಮಿಸ್ನಾದ್ ಸಂಸ್ಥೆ ಉಪಸ್ಥಿತರಿದ್ದರು. ಕರ್ನಾಟಕ ಮೂಲದ ಇತರ ಸಹೋದರ ಸಂಘಗಳಾದ ತುಳು ಕೂಟ, ಬಂಟ್ಸ್ ಕತಾರ್, ಕೆ. ಎಂ.ಸಿ.ಎ, ಎಂ.ಸಿ.ಎ, ಎಂ.ಸಿ.ಸಿ ಹಾಗು ಎಸ್.ಕೆ.ಎಂ.ಡ್ಬ್ಲು.ಎ. ಇವುಗಳ ಅಧ್ಯಕ್ಶ್ರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುಮಾರು ಒಂದು ವರ್ಷದ ನಂತರ ಅಂತರ್ಜಾಲದ ಹೊರಗೆ ಕಾರ್ಯಕ್ರಮವನ್ನು ಮಾಡಲು ಸಾಧ್ಯವಾಯಿತು. ಆಗಮಿಸಿದ್ದವರೆಲ್ಲರೂ ಮಹಾಮಾರಿಯನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರು. ಕೈಶುಚಿ, ಬಾಯಿ ಮೂಗುಗಳಿಗೆ ಮುಖವಾಡ, ‘ಎತಿರಾಝ್’ ತಂತ್ರಾಂಶ ಹಾಗು ಬಹುಮಂದಿ ಲಸಿಕೆಗಲನ್ನು ಪಡೆದಿದ್ದರು.

ಶ್ರೀ ಮುರಳೀದರ್ ರಾವ್, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳು ಕಾರ್ಯಕ್ರಮವನ್ನು ಸ್ವಾಗತ ಸಂದೇಶದೊಂದಿಗೆ ಪ್ರಾರಂಬಿಸಿದರು. ಹೆಚ್ಚು ತಡ ಮಾಡದೆ, ಆಗಮಿಸಿದ್ದ ಗಣ್ಯರು ಮತ್ತು ಸಭಿಕರು ಗಿಡ ನೆಡುವುದರಲ್ಲಿ ನಿರತರಾದರು. ಹೊಂಡಗಲನ್ನು ಮುಂಚಿತವಾಗಿಯೆ ತೋಡಿಡಲಾಗಿತ್ತು. ಮಾವು ಬೇವು ಮುಂತಾದ ಸಸಿಗಳನ್ನು ತಂದು ಆಗಮಿಸಿದ್ದ ಎಲ್ಲರೂ ನೆಟ್ಟು ಸಂತಸ ವ್ಯಕ್ತ ಪಡಿಸಿದರು.

ನಂತರ ಒಳಾಂಗಣ ಪ್ರವೇಶಿಸಿ ಕಾರ್ಯಕ್ರಮದ ಮುಂದಿನ ಭಾಗದಲ್ಲಿ ಮುಖ್ಯ ಅತಿಥಿಗಳ ಭಾಷಣ, ಗೌರವಾನ್ವಿತ ಅತಿಥಿಗಳ ಕಿರು ಸಂದೇಶ, ಸಂಘದ ಜಂಟಿ ಕಾರ್ಯದರ್ಶಿಯಿಂದ ಪರಿಸರ ದಿನಾಚರಣೆಯ ಅವಶ್ಯಕತೆ ಮತ್ತು ಮಹತ್ವ ತಿಳಿಸಲಾಯಿತು.

ಶ್ರೀ ಕುಮಾರಸ್ವಾಮಿ, ಸಂಘದ ಪರಿಸರ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಅವರು ವಂದನಾರ್ಪಣೆಗಳನ್ನು ಸಲ್ಲಿಸಿದರು. ಲಘು ಉಪಹಾರ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪೂರ್ಣವಾಯಿತು.

Comments are closed.