Entertainment

ಹುಟ್ಟೂರು ಉಡುಪಿಯ ಮಜಲಬೆಟ್ಟುಬೀಡುವಿನಲ್ಲಿ ಸುಮಂತ್ ಜೊತೆ ಸರಳ ವಿವಾಹವಾದ ನಟಿ ಶುಭಾ ಪೂಂಜಾ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  ತಮ್ಮ ಬಹುಕಾಲದ ಗೆಳೆಯ ಸುಮಂತ್ ಜತೆ ಸಪ್ತಪದಿ ತುಳಿದಿದ್ದಾರೆ.

ತಮ್ಮ ಊರಾದ ಉಡುಪಿ ಶಿರ್ವದ ಮಜಲಬೆಟ್ಟು ಬೀಡು ಎಂಬಲ್ಲಿ ಸುಮಂತ್ ಹಾಗೂ ಶುಭಾ  ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ಮದುವೆ ಮಾಡಿಕೊಂಡಿದ್ದಾರೆ. ಉಡುಪಿಯ ಮಜಲಬೆಟ್ಟುಬೀಡುವಿನಲ್ಲಿ ಕುಟುಂಬದವರು ಹಾಗು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನಡೆಯಿತು. ಶುಭಾ ಮದುವೆಗೆ ಬಿಗ್ ಬಾಸ್ ವಿಜೇತ ಮಂಜು ಪಾವಗಡ ಆಗಮಿಸಿ ಶುಭ ಹಾರೈಸಿದರು. ಇನ್ನು ಸುಮಂತ್ ಕುಂದಾಪುರ ಮೂಲದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವು ಸಂಘಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದ್ದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮದುವೆ ಬಗ್ಗೆ ತಮ್ಮ ಅಧೀಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶುಭಾ ಪೂಂಜಾ, “ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು…ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ  ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ  ಸರಳ ವಿವಾಹವಾದೆವು.
ನಿಮ್ಮೆಲ್ಲರ ಪ್ರೀತಿ ಮತ್ತು  ಹಾರೈಕೆಗಳು ನಮ್ಮ ಮೇಲಿರಲಿ” ಎಂದು ಬರೆದುಕೊಂಡಿದ್ದಾರೆ.

Comments are closed.