ವಾಣಿಜ್ಯ

10 ವರ್ಷಗಳಲ್ಲೇ 2 ನೇ ಬಾರಿಗೆ ಕುಸಿತ ಕಂಡ ಚಿನ್ನದ ಬೇಡಿಕೆ

Pinterest LinkedIn Tumblr

ಭುವನೇಶ್ವರ್: ಚಿನ್ನದ ಬೇಡಿಕೆ 10 ವರ್ಷಗಳಲ್ಲೇ 2 ನೇ ಬಾರಿಗೆ ಕುಸಿತ ಕಂಡಿದ್ದು, 2018 ರ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ.12 ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಚಿನ್ನದ ಪರಿಷತ್ ಹೇಳಿದೆ.

ಸ್ಥಳೀಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದು, ಕಳೆದ ವರ್ಷಕ್ಕಿಂತ ಈ ವರ್ಷ ವಿವಾಹಗಳ ಶುಭ ಮುಹೂರ್ತಗಳು ಕಡಿಮೆಯಾಗಿರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಚಿನ್ನದ ಬೇಡಿಕೆ ಕುಗ್ಗಿದೆ ಎಂದು ಡಬ್ಲ್ಯೂಜಿಸಿ ಯ ನಿರ್ದೇಶಕ ಪಿಆರ್ ಸೋಮಸುಂದರಮ್ ಹೇಳಿದ್ದಾರೆ.

ಚಿನ್ನದ ಬೇಡಿಕೆ 99.2 ಟನ್ ಗಳಿಂದ 87.7 ಟನ್ ಗಳಿಗೆ ಕುಸಿದಿದ್ದು, ಆಮದೂ ಸಹ 260 ಟನ್ ಗಳಿಂದ 153 ಟನ್ ಗಳಿಗೆ ಕುಸಿದಿದೆ. 2008 ರ ಆರ್ಥಿಕ ಬಿಕ್ಕಟ್ಟಿನ ನಂತರ ಇದೇ ಮೊದಲ ಬಾರಿಗೆ ಮೊದಲ ತ್ರೈಮಾಸಿಕದಲ್ಲಿ ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಸಂಬಂಧಿಸಿದಂತೆ ಅತ್ಯಂತ ದುರ್ಬಲವಾದ ತೈಮಾಸಿಕವಾಗಿದೆ ಎಂದು ಭಾರತದ ಬೇಡಿಕೆಯನ್ನು ಹೊರತುಪಡಿಸಿ ಚೀನಾ ಹಾಗೂ ಅಮೆರಿಕಾಗಳಲ್ಲಿ ಚಿನ್ನಾಭರಣಗಳ ಖರೀದಿ ಹೆಚ್ಚಿನ ಪ್ರಮಾಣದಲ್ಲಿಯೇ ಇತ್ತಾದ್ದರಿಂದ ಚಿನ್ನಾಭರಣಗಳ ಬೇಡಿಕೆ 487.7 ಟನ್ ಗಳಲ್ಲಿ ಸ್ಥಿರವಾಗಿತ್ತು ಎಂದು ಡಬ್ಲ್ಯೂಜಿಸಿ ಹೇಳಿದೆ.

Comments are closed.