ಕರಾವಳಿ

ಬೈಂದೂರು ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿಗೆ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಕರೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಫೋನ್ ಮೂಲಕ ಬೆದರಿಕೆ ಕರೆ ಬಂದಿರುವ ಘಟನೆ ನಡೆದಿದೆ.

ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿ ಅವರಿಗೆ ವಿದೇಶದಿಂದ ಬೆದರಿಕೆ ಕರೆ ಬಂದಿದ್ದು, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ವ್ಯಕ್ತಿಯೋರ್ವ ಫೊನ್ ಮೂಲಕ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಕರೆ ಬಂದಿರುವ ಹಿನ್ನಲೆಯಲ್ಲಿ ರವಿ ಶೆಟ್ಟಿ ಕೊಲ್ಲೂರು ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ.

ಈ ಹಿಂದೆಯೂ ಅನಾಮಿಕ ವ್ಯಕ್ತಿಯೋರ್ವ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದನಂತೆ. ಇಲ್ಲದಿದ್ದಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸು,ಇಲ್ಲವಾದಲ್ಲಿ ಸೈಲೆಂಟಾಗಿರಬೇಕೆಂದು ಕೂಡ ಹೇಳಿದ್ದರು ಎಂದು ರವಿ ಶೆಟ್ಟಿ ಆರೋಪಿಸಿದ್ದಾರೆ.

ಬೈಂದೂರಲ್ಲಿ ಜೆಡಿಎಸ್ ಬೆಳವಣಿಗೆಯನ್ನ ಸಹಿಸದ ಪ್ರತಿಪಕ್ಷಗಳು ಈ ರೀತಿ ಕೀಳು ಕೃತ್ಯಕ್ಕೆ ಇಳಿದಿವೆ .ಕೆಲವು ದಿನಗಳ ಹಿಂದೆ ಮನೆ ಮುಂದೆ ವಾಮಾಚಾರದಂತಹ ಕೃತ್ಯಗಳನ್ನು ಮಾಡಿದ್ದರು.

ತನ್ನ‌ ಕುಟುಂಬ ಭಯದ ವಾತವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತನಗೆ ರಕ್ಷಣೆ ಬೇಕೆಂದು‌ ಪೊಲೀಸರಿಗೆ ದೂರನ್ನ ನೀಡಿದ್ದಾರೆ.

Comments are closed.