ಕರಾವಳಿ

ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಅಸಮಾಧಾನ: 20ಕ್ಕೂ ಅಧಿಕ ಮಂದಿ ಬಿಜೆಪಿಗೆ ‘ಗುಡ್ ಬೈ’!

Pinterest LinkedIn Tumblr

ಕುಂದಾಪುರ: ಕುಂದಾಪುರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ದ ಅಸಮಧಾನಗೊಂಡಿರುವ ಬಿಜೆಪಿಯ ಸದಸ್ಯರು ಇಂದು‌ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಾಮೂಹಿಕವಾಗಿ ಪಕ್ಷದ ಪ್ರಾಥಮಿಕ‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸುಮಾರು 20 ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆಯನ್ನ ನೀಡಿದ್ದು, ಚುನಾವಣೆಯಲ್ಲಿ ತಟಸ್ಥ ನೀತಿ ಅನುಸರಿಸಲು ಚಿಂತನೆ ನಡೆಸಿದ್ದಾರೆ.

ಕಳೆದ ಬಾರಿ ಬಿಜೆಪಿಯಿಂದ ಮಂತ್ರಿ‌ಸ್ಥಾನ ಸಿಗದ ಕಾರಣ ಪಕ್ಷಕ್ಕೆ ರಾಜೀನಾಮೆ ನೀಡಿ, ಪಕ್ಷೇತರರಾಗಿ ನಿಂತು ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬಿಜೆಪಿ ಕಾರ್ಯಕರ್ತರ ಮೇಲೆ ಹಲವಾರು ಸುಳ್ಳು ಕೇಸುಗಳನ್ನ ಹಾಕಿ ದೌರ್ಜನ್ಯ ನಡೆಸಿದ್ದಾರೆಂಬ ಆರೋಪವನ್ನು ಅಸಮಾಧಾನಗೊಂಡ ಕಾರ್ಯಕರ್ತರು ಆರೋಪ ಮಾಡಿದ್ದು ಬಿಜೆಪಿ ಈ ಬಾರಿ ಮತ್ತೆ ಶ್ರೀನಿವಾಸ ಶೆಟ್ಟಿಯವರಿಗೆ ಟಿಕೆಟ್ ನೀಡಿದ್ದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರನ್ನ ನಿರ್ಲಕ್ಷಿಸಿ ಬಿಜೆಪಿ ಹೈಕಾಮಾಂಡ್ ಟಿಕೆಟ್ ನೀಡಿರುವುದು ಬಿಜೆಪಿ ಸದಸ್ಯರ ಅಸಮಾಧನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ಕಳೆದ ೧೮ ವರುಷಗಳಿಂದ ಶಾಸಕನಾಗಿರುವ ಹಾಲಾಡಿ ಅಭಿವೃದ್ದಿ ಕಾರ್ಯಗಳಲ್ಲಿ‌ ತುಂಬಾನೇ ಹಿಂದುಳಿದಿದ್ದಾರೆ. ಯಾವುದೇ ಕೆಲಸ ಮಾಡದ ಅಭ್ಯರ್ಥಿಗೆ ತಮ್ಮ ಬೆಂಬಲವಿಲ್ಲ ಅನ್ನೋ‌ ಕಾರಣಕ್ಕೆ ರಾಜೀನಾಮೆಯನ್ನ‌ ನೀಡ್ತಾ ಇದ್ದೆವೇ ಅಂತಿದ್ದಾರೆ ಕಾರ್ಯಕರ್ತರು.

ಕಳೆದ ಕೆಲವು‌ ದಿನಗಳ‌ ಹಿಂದೆ ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿನ, ಜಿಲ್ಲಾ ಹುದ್ದೆಗಳಲ್ಲಿದ್ದ ಪ್ರಮುಖರು ಸಾಮೂಹಿಕವಾಗಿ ತಮ್ಮ‌ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.

ಇದೀಗ ಪಕ್ಷದ ಕಾರ್ಯಕರ್ತರು ಕೂಡ ದಿನೇ ದಿನೇ ರಾಜೀನಾಮೆ ನೀಡುತ್ತಿರುವುದು ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Comments are closed.