ಅಂತರಾಷ್ಟ್ರೀಯ

ಲೈಂಗಿಕ ಹಗರಣದ ಆರೋಪ: ನೋಬೆಲ್ ಸಾಹಿತ್ಯ ಪ್ರಶಸ್ತಿ-2018, ಮುಂದೂಡಿಕೆ

Pinterest LinkedIn Tumblr

ಕೋಪನ್ ಹ್ಯಾಗನ್: ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ನಿರ್ಧರಿಸುವ ಅಕಾಡೆಮಿ ವಿರುದ್ಧ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಮುಂದಿನ ವರ್ಷಕ್ಕೆ ಮುಂಡೂಡಲಾಗಿದೆ ಎಂದು ಸ್ವೀಡಿಷ್ ಅಕಾಡೆಮಿ ಹೇಳಿದೆ.

ಲೈಂಗಿಕ ದೌರ್ಜನ್ಯ ಆರೋಪ, ಆರ್ಥಿಕ ಹಗರಣಗಳ ಆರೋಪ ಹಾಗೂ ಇನ್ನಿತರ ಸಮಸ್ಯೆಗಳಿಂದಾಗಿ ಅಕಾಡೆಮಿಯ ಖ್ಯಾತಿಗೆ ಕಳಂಕ ಬಂದಿದ್ದು, ಸಾಹಿತ್ಯ ಪ್ರಶಸ್ತಿ ಪ್ರದಾನವನ್ನು ಮುಂದಿನ ವರ್ಷಕ್ಕೆ ಮುಂದೂಡಲು ಸ್ಟಾಕ್ಹೋಮ್ ನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

” ಆರೋಪಗಳ ಹಿನ್ನೆಲೆಯಲ್ಲಿ ಅಕಾಡೆಮಿಗೆ ವಿಜೇತರನ್ನು ಆಯ್ಕೆ ಮಾಡುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ 2018 ರ ಸಾಲಿನ ಪ್ರಶಸ್ತಿಯನ್ನು 2019 ರಲ್ಲಿ ನೀಡಲಾಗುವುದು ಎಂದು ಅಕಾಡೆಮಿ ಹೇಳಿದೆ. 1943 ರ ನಂತರ ಇದೇ ಮೊದಲ ಬಾರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿಲ್ಲ.

Comments are closed.