ವಾಣಿಜ್ಯ

ತನ್ನೆಲ್ಲ ಗ್ರಾಹಕರಿಗೆ ಬಿಗ್ ಶಾಕಿಂಗ್ ನ್ಯೂಸ್ ನೀಡಲಿದೆಯೇ ಜಿಯೋ ?

Pinterest LinkedIn Tumblr

ಕಳೆದ ವರ್ಷ ಸೆಪ್ಟೆಂಬರ್ 5 ರಂದು ಭರ್ಜರಿಯಾಗಿ ದೇಶದಾದ್ಯಂತ ಟೆಲಿಕಾಂ ಜಗತ್ತಿನಲ್ಲಿಯೇ ಹೊಸ ಅಲೆ ಸೃಷ್ಟಿಸಿದ ಜಿಯೋ ದಿನದಿಂದ ದಿನಕ್ಕೆ ತನ್ನ ಖ್ಯಾತಿಯನ್ನು ಕಳೆದುಕೊಳ್ಳುತ್ತಿದೆ’ ಎಂದು ವರದಿಯೊಂದು ತಿಳಿಸಿದೆ.

ಆರಂಭದ ಒಂದು ವರ್ಷಗಳ ಕಾಲ ಎಲ್ಲರಿಗೂ ಉಚಿತ ಬರಪೂರ ಡಾಟಾ,ಕರೆ, ಸಂದೇಶ ಮುಂತಾದ ಸೌಲಭ್ಯಗಳನ್ನು ನೀಡಿ ಇತರ ಕಂಪನಿಗಳನ್ನು ಮುಳುಗಿಸುವ ಹಂತಕ್ಕೆ ತಂದಿತ್ತು. ಜಿಯೋದ ಉಚಿತ ಆಫರ್’ಗಳಿಂದಾಗಿ ಸಣ್ಣಪುಟ್ಟ ಕಂಪನಿಗಳು ದಿವಾಳಿ ಸ್ಥಿತಿಗೆ ತಲುಪಿದರೆ, ಏರ್’ಟೆಲ್, ವೊಡಾಫೋನ್, ಐಡಿಯಾ ಮುಂತಾದ ದೊಡ್ಡ ದೊಡ್ಡ ಕಂಪನಿಗಳು ಚಿಂತಾಕ್ರಾಂತವಾಗಿದ್ದವು.

ನಂತರದ ದಿನಗಳಲ್ಲಿ ಉಚಿತ ಆಫರ್’ಗಳನ್ನು ಕೈಬಿಟ್ಟು ರಿಯಾಯಿತಿ ದರದಲ್ಲಿ ಯೋಜನೆಗಳನ್ನು ಪ್ರಕಟಿಸಿದ ನಂತರ ಇತರ ಕಂಪನಿಗಳು ಸಹ ಜಿಯೋ ಜೊತೆ ಪೈಪೋಟಿಗಿಳಿದು ತಮ್ಮ ವ್ಯವಹಾರವನ್ನು ಸಹಜ ಸ್ಥಿತಿಗೆ ತಂದುಕೊಂಡವು. ಕೇವಲ ಒಂದೂವರೆ ವರ್ಷದಲ್ಲಿ ಜಿಯೋ 10 ಕೋಟಿಗೂ ಅಧಿಕ ಚಂದಾದಾರರನ್ನು ತನ್ನ ಕಡೆ ಸೆಳೆದುಕೊಂಡಿತ್ತು.

ಆದಾಯ ಬರಲಿಲ್ಲ, ನಷ್ಟವೇ ಹೆಚ್ಚು

ಕೆಲ ತಿಂಗಳುಗಳಲ್ಲಿಯೇ ತನ್ನ ಕಂಪನಿಯನ್ನು ಬೃಹದಾಕಾರವಾಗಿ ವಿಸ್ತರಿಸಿದ ಜಿಯೋ ನಂತರದ ದಿನಗಳಲ್ಲಿ ಇತರ ಕಂಪನಿಗಳು ಜಿಯೋ ರೀತಿಯಲ್ಲಿ ಸ್ಪರ್ಧೆ ನೀಡಿದ ಪರಿಣಾಮ ಲಕ್ಷಾಂತರ ಚಂದಾದಾರರನ್ನು ಕಳೆದುಕೊಳ್ಳತೊಡಗಿತು. ಮಾರುಕಟ್ಟೆಯು ಬರುಬರುತ್ತಾ ಕುಸಿಯತೊಡಗಿತು. ಮುಕೇಶ್ ಅಂಬಾನಿ ಒಡೆತನದ ಇತರ ಸಂಸ್ಥೆಗಳು ಲಾಭ ಗಳಿಸಿದರೆ ಜಿಯೋ ಮಾತ್ರ ನಷ್ಟ ಅನುಭವಿಸತೊಡಗಿತು.

ವರದಿಗಳ ಪ್ರಕಾರ ಜಿಯೋ ಲಾಭಕ್ಕಿಂತ ನಷ್ಟವನ್ನೇ ಅನುಭವಿಸಿದೆ. ಸಂಸ್ಥೆ ಆರಂಭಿಸಿದ ದಿನದಿಂದ ಇಲ್ಲಿಯವರೆಗೂ ಲಾಭದ ಕಡೆ ಮುಖ ಮಾಡಿಲ್ಲ. ಕಂಪನಿ ನಷ್ಟ ಅನುಭವಿಸುತ್ತಿರುವ ಕಾರಣ ಉಚಿತ ಆಫರ್’ಗಳನ್ನು ಕೈಬಿಡುವ ಸಾಧ್ಯತೆಯಿದೆ. ಅಲ್ಲದೆ ಡಾಟಾ ಮಿತಿಯನ್ನು ಕಡಿಮೆಗೊಳಿಸುವ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

Comments are closed.