
ಇತ್ತಿಚಿನ ದಿನಗಳಲ್ಲಿ ಕ್ರಿಕೆಟಿಗರ ವಿವಾಹ ಸರದಿ ಸಾಲಿನಲ್ಲಿ ನಡೆಯುತ್ತಿವೆ. ವಿರಾಟ್, ಜಾಹೀರ್ ಖಾನ್, ಭುವನೇಶ್ವರ್ ಈಗ ಕೃನಾಲ್ ಪಾಂಡ್ಯ. ಇವರು ಮತ್ಯಾರು ಅಲ್ಲ ಭಾರತದ ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸಹೋದರ.
ಕೃನಾಲ್ ಕೂಡ ಆಲ್’ರೌಂಡರ್ ಆಗಿದ್ದು ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಾನ್’ಕೂರಿ ಶರ್ಮಾ ಅವರನ್ನು ಡಿ.27 ರಂದು ವಿವಾಹವಾಗಲಿದ್ದಾರೆ. 26 ವರ್ಷದ ಕ್ರಿಕೆಟಿಗ ಕೃನಾಲ್ ಈ ಸಾಲಿನಲ್ಲಿ ನಡೆದ ಐಪಿಎಲ್ ಫೈನಲ್’ ಪಂದ್ಯದಲ್ಲಿ ಪುಣೆ ವಿರುದ್ಧ 38 ಎಸೆತಗಳಲ್ಲಿ 47 ರನ್ ಸಿಡಿಸಿ ಪಂದ್ಯ ಪುರುಷೋತಮ್ ಪ್ರಶಸ್ತಿಗೆ ಭಾಜನರಾಗಿದ್ದರು.
ಇವರ ವಿವಾಹ ಮಹೋತ್ಸವದಲ್ಲಿ ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಖ್ಯಾತ ಕ್ರಿಕೆಟಿಗರು ಆಗಮಿಸುವ ನಿರೀಕ್ಷೆಯಿದೆ.
Comments are closed.