ಮನೋರಂಜನೆ

ನನಗೆ ಲಾಕ್‍ಡೌನ್ ಆರಂಭವಾಗಿ 22 ವರ್ಷ: ಅಜಯ್ ದೇವಗನ್

Pinterest LinkedIn Tumblr


ಲಾಕ್‍ಡೌನ್ ಸಮಯವನ್ನು ಸಿನಿಮಾ ತಾರೆಗಳು ಅರ್ಥಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೆಲವು ತಾರೆಗಳು ತಮ್ಮ ವೈಯಕ್ತಿಕ ಸಂಗತಿಗಳನ್ನು ಹಾಗೂ ಹಳೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.

ಇದೀಗ ಬಾಲಿವುಡ್ ಹೀರೋ ಅಜಯ್ ದೇವಗನ್ ಹಳೇ ಫೋಟೋವನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅಜಯ್ ದೇವಗನ್ ತನ್ನ ಪತ್ನಿ ಕಾಜೋಲ್ ಜೊತೆಗೆ ಸಿನಿಮಾ ಶೂಟಿಂಗ್‌ನಲ್ಲಿರುವ ಸಂದರ್ಭದ ಫೋಟೋ ಇದು. “ನನಗೆ ಲಾಕ್‍ಡೌನ್ ಆರಂಭವಾಗಿ 22 ವರ್ಷಗಳಾದವು ಅನ್ನಿಸುತ್ತದೆ” ಎಂದು ಅಜಯ್ ದೇವಗನ್ ತಮಾಷೆಗೆ ಕಾಮೆಂಟ್ ಮಾಡಿ ಕಾಜೋಲ್‍ಗೆ ಟ್ಯಾಗ್ ಮಾಡಿದ್ದಾರೆ.

‘ಹಲ್ ಚಲ್’ ಸಿನಿಮಾ ಚಿತ್ರೀಕರಣದಲ್ಲಿ ಕಾಜೋಲ್‌ರನ್ನು ಅಜಯ್ ಭೇಟಿಯಾಗಿದ್ದರು. ಬಳಿಕ 1999ರಲ್ಲಿ ಈ ಜೋಡಿ ಮದುವೆಯಾಯಿತು. ಇವರಿಬ್ಬರೂ ಗೂಂಡಾರಾಜ್, ಇಷ್ಕ್, ದಿಲ್ ಕ್ಯಾ ಕರೇ, ರಾಜು ಚಾಚಾ, ಪ್ಯಾರ್ ಹೋನಾ ಹೀ ಥಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಜೋಡಿಗೆ 2003ರಲ್ಲಿ ಮಗಳು ನೈಸಾ, 2010ರಲ್ಲಿ ಮಗ ಯುಗ್ ಜನಿಸಿದರು.

ದಿ ಬಿಗ್ ಬುಲ್, ಮೈದಾನ್, ಸೂರ್ಯವಂಶಿ, ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಸೇರಿದಂತೆ ಇನ್ನೆರಡು ಸಿನಿಮಾಗಳಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ. ಲಾಕ್‍ಡೌನ್ ಕಾರಣದಿಂದ ಹಲವಾರು ಸಿನಿಮಾಗಳ ಶೂಟಿಂಗ್‍ಗೆ ತಡೆ ಬಿದ್ದಿದೆ. ಅದೇ ರೀತಿ ಇತ್ತೀಚೆಗೆ ಅಭಿನಯಿಸಿದ ಸಿನಿಮಾ ತಾನ್ಹಾಜಿ: ದಿ ಅನ್ ಸಂಗ್ ವಾರಿಯರ್. ಈ ಚಿತ್ರದಲ್ಲಿ ಕಾಜೋಲ್ ಸಹ ಕಾಣಿಸಿದ್ದಾರೆ.

Comments are closed.