ರಾಷ್ಟ್ರೀಯ

ತಮಿಳುನಾಡು: ಕೊರೋನಾಗೆ ತಾನೇ ಕಂಡು ಹಿಡಿದ ಔಷಧ ಸೇವಿಸಿ ವ್ಯಕ್ತಿ ಸಾವು

Pinterest LinkedIn Tumblr


ಚೆನ್ನೈ(ಮೇ 09): ಕೊರೋನಾ ವೈರಸ್ ಚಿಕಿತ್ಸೆಗೆ ಔಷಧ ಕಂಡುಹಿಡಿಯಲು ಜಗತ್ತಿನಾದ್ಯಂತ ಎಲ್ಲೆಡೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಮೊದಲು ಔಷಧ ತಯಾರಿಸಿ ಸೈ ಎನಿಸಿಕೊಳ್ಳಲು ಎಲ್ಲರೂ ಕಾತರರಾಗಿದ್ಧಾರೆ. ಅಂತೆಯೇ, ಚೆನ್ನೈ ಮೂಲದ ಆಯುರ್ವೇದ ಉತ್ಪನ್ನ ಕಂಪನಿಯೊಂದರ ಮಾಲೀಕ ಮತ್ತು ಮಾಜಿ ಉದ್ಯೋಗಿ ಇಬ್ಬರೂ ಔಷಧ ಕಂಡುಹಿಡಿದ್ದಾರೆ. ಮೊದಲು ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡಿದ್ದಾರೆ. ಆದರೆ, ಔಷಧದ ಪ್ರಭಾವದಿಂದ 47 ವರ್ಷದ ಕೆ. ಸಿವನೇಸನ್ ಮೃತ ಪಟ್ಟಿದ್ದಾರೆ.ಸ ಉಜಾತಾ ಬಯೋಟೆಕ್ ಕಂಪನಿಯ ಮಾಲೀಕ ಮತ್ತು ಎಂಡಿ 67 ವರ್ಷದ ಡಾ. ರಾಜ್ ಕುಮಾರ್ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಲತಃ ಆಫ್ತಾಮೊಲಾಜಿಸ್ಟ್(ನೇತ್ರ ತಜ್ಞ) ಆಗಿದ್ದ 47 ವರ್ಷದ ಕೆ. ಶಿನೇಶನ್ (ಸಿವನೇಸನ್) ಅವರು ಚೆನ್ನೈನ ಪೇರುಂಗುಡಿಯಲ್ಲಿ ಫಾರ್ಮಾಸಿಸ್ಟ್ ಆಗಿದ್ದರು. ಈ ಮುಂಚೆ ಅವರು ಚೆನ್ನೈ ಮೂಲದ ಸುಜಾತಾ ಬಯೋಟೆಕ್ ಎಂಬ ಆಯುರ್ವೇದ ಉತ್ಪನ್ನ ಕಂಪನಿಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು. ಉತ್ತರಾಖಂಡ್​ನ ಕಾಶಿಪುರ್​ನ ಘಟಕದಲ್ಲಿ ಅವರು ಕೆಲಸ ಮಾಡುತ್ತಿದ್ದಾಗ ಕಂಪನಿಯ ಮಾಲೀಕ ಡಾ. ರಾಜ್ ಕುಮಾರ್ ಅವರ ನಿಕಟ ಸಂಪರ್ಕ ಇತ್ತು. ಕಂಪನಿಯ ಉತ್ಪನ್ನಗಳಿಗೆ ಸಿವನೇಸನ್ ಅವರೇ ಫಾರ್ಮುಲಾ ನೀಡುತ್ತಿದ್ದುದು.

ಈಗ ಇದೇ ವಿಚಾರವಾಗಿ ಚೆನ್ನೈನಲ್ಲಿ ಸಿವನೇಸನ್ ಮತ್ತು ರಾಜಕುಮಾರ್ ಇಬ್ಬರೂ ಆಗಾಗ ಸಂಧಿಸುತ್ತಿದ್ದರು. ಕೊರೋನಾ ವೈರಸ್​ಗೆ ಇಬ್ಬರೂ ಸೇರಿ ಫಾರ್ಮುಲಾ ತಯಾರಿಸಿದ್ದರು. ನೈಟ್ರಿಕ್ ಆಕ್ಸೈಡ್ ಮತ್ತು ಸೋಡಿಯಮ್ ನೈಟ್ರೇಟ್ ಬಳಸಿ ಔಷಧ ರೂಪಿಸಿದ್ದರು. ಇದು ದೇಹದಲ್ಲಿ ಪ್ಲೇಟ್​ಲೆಟ್ ಹೆಚ್ಚಿಸುತ್ತದೆ. ಕೋವಿಡ್-19 ಚಿಕಿತ್ಸೆಗೆ ಸಹಕಾರಿಯಾಗುತ್ತದೆ ಎಂದೇ ಇವರು ನಂಬಿದ್ದರು. ಒಂದು ವೇಳೆ ಈ ಔಷಧ ಸರಿಯಾಗಿ ಕೆಲಸ ಮಾಡಿದರೆ ತಮ್ಮ ಕಂಪನಿಯು ಭಾರೀ ಲಾಭ ಮಾಡಿಕೊಳ್ಳುತ್ತದೆ ಎಂಬ ಆಸೆ ಮತ್ತು ಎಣಿಕೆಯೂ ಅವರಲ್ಲಿತ್ತು. ಅದಕ್ಕೆ ಅವರಿಬ್ಬರೂ ಕೂಡ ಈ ದ್ರಾವಣವನ್ನು ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡರು. ಆದರೆ, ಕೆಲ ವರದಿಗಳ ಪ್ರಕಾರ ಅವರು ಸೋಪ್ ಮತ್ತು ಪೆಟ್ರೊಲಿಯಂ ರಿಫೈನಿಂಗ್​ಗೆ ಬಳಸುವ ಸೋಡಿಯಂ ಹೈಡ್ರೇಟ್ ದ್ರಾವಣವನ್ನು ಸೇವಿಸಿದ್ದಾರೆ.

ರಾಸಾಯನಿಕ ದ್ರಾವಣ ಸೇರವಿಸಿದ ಕೂಡಲೇ ಇಬ್ಬರೂ ಅಸ್ವಸ್ಥಗೊಳ್ಳುತ್ತಾರೆ. ಟಿ. ನಗರದ ಖಾಸಗಿ ಆಸ್ಪತ್ರೆಗೆ ಅವರನ್ನ ಕರೆದೊಯ್ಯಲಾಗುತ್ತದೆ. ಸಿವನೇಸನ್ ಅವರು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲೇ ಮೃತಪಡುತ್ತಾರೆ. ಡಾ. ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ಧಾರೆ.

Comments are closed.