ಮನೋರಂಜನೆ

ನಟ ಶಿವರಾಜ್​ಕುಮಾರ್​ಗೆ ಪದ್ಮಶ್ರೀ ಪ್ರಶಸ್ತಿ ನೀಡದಿರುವುದಕ್ಕೆ ಆಕ್ರೋಶಗೊಂಡ ಅಭಿಮಾನಿಗಳು !

Pinterest LinkedIn Tumblr

ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಣೆ ಮಾಡಿತ್ತು. ಆದರೆ, ಇದರಲ್ಲಿ ಸೆಂಚುರಿ ಸ್ಟಾರ್​ ಶಿವರಾಜ್​ಕುಮಾರ್​ ಹೆಸರು ಇರದಿರುವುದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ಅವರು ಪ್ರಶಸ್ತಿ ಪಡೆಯಲು ಅರ್ಹರು ಎಂದು ವಾದಿಸಿದ್ದಾರೆ.

ಬಾಲಿವುಡ್​ ನಟಿ ಕಂಗನಾ ರಣಾವತ್​ಗೆ ಪದ್ಮಶ್ರೀ ದೊರೆತಿದೆ. ಆದರೆ, ಶಿವರಾಜ್​ಕುಮಾರ್​ಗೆ ಪ್ರಶಸ್ತಿ ಏಕಿಲ್ಲ ಎನ್ನುವುದು ಶಿವರಾಜ್​ಕುಮಾರ್​ ಅಭಿಮಾನಿಗಳ ಪ್ರಶ್ನೆ. “ಕಂಗನಾ ಕೇವಲ 30 ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ನಮ್ಮ ಶಿವಣ್ಣ 120 ಚಿತ್ರಗಳಲ್ಲಿ ನಟಿಸಿದ್ದಾರೆ. ಕಂಗನಾಗಿಂತ ಹೆಚ್ಚು ಚಿತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ,” ಎಂದಿದ್ದಾರೆ ಶಿವರಾಜ್​ಕುಮಾರ್​ ಅಭಿಮಾನಿಗಳು.

“ಶಿವಣ್ಣನ ಮೊದಲ ಸಿನಿಮಾ 1986ರಲ್ಲಿ ಬಿಡುಗಡೆ ಆಗಿದೆ. ಕಂಗನಾ ರಣಾವತ್ ಹುಟ್ಟಿದ್ದೆ 1987 ರಲ್ಲಿ. ಕಂಗನಾ ಹಿಟ್ ಸಿನಿಮಾಗಳಿಗಿಂತ ಫ್ಲಾಪ್​ ಚಿತ್ರಗಳನ್ನೇ ನೀಡಿದ್ದು ಹೆಚ್ಚು. ಹೀಗಿರುವಾಗ, ಶಿವರಾಜಕುಮಾರ್ ಅವರಂಥ ಹಿರಿಯ ಕಲಾವಿದರು ಕಾಣಲಿಲ್ಲವೇ,” ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

Comments are closed.