ಚೆನ್ನೈ: ಕನ್ನಡ ನಟನ ಮೇಲೆ ಹಲ್ಲೆ ನಡೆಸಿದ ತಮಿಳು ನಟನ ವಿರುದ್ಧ ಪ್ರಕರಣ ದಾಖಲಾಗಿದೆ.
ವಿರುಗಂಬಕ್ಕಂ ನಲ್ಲಿ ಈ ಘಟನೆ ನಡೆದಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.09 ರಂದು ಸರ್ವಿಸ್ ಅಪಾರ್ಟ್ ಮೆಂಟ್ ಗೆ ತಮಿಳು ನಟ ವೆಮಲ್ ಹಾಗೂ ಆತನ ನಾಲ್ವರು ಸ್ನೇಹಿತರು ತೆರಳಿದ್ದರು. ಅದೇ ಅಪಾರ್ಟ್ ಮೆಂಟ್ ನಲ್ಲಿ ಕನ್ನಡದ ನಟ ಅಭಿಷೇಕ್ ಸಹ ಇದ್ದರು. ಇಬ್ಬರೂ ನಟರು ತಮ್ಮ ಸ್ನೇಹಿತರೊಂದಿಗೆ ಇದ್ದಾಗ ಹಲ್ಲೆಯ ಘಟನೆ ನಡೆದಿದೆ. ಈ ವೇಳೆ ಬಂದ ವೇಮಲ್ ಅಭಿಷೇಕ್ ಬಳಿ ಏನನ್ನೋ ಕೇಳಿದ್ದಾರೆ, ಆದರೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದ ಅಭಿಷೇಕ್ ಇದಕ್ಕೆ ಸ್ಪಂದಿಸಲಿಲ್ಲ. ಇದರಿಂದ ತಮಿಳುನಟ ಕೋಪಗೊಂಡಿದ್ದರ ಪರಿಣಾಮ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿ, ನಂತರ ತಮಿಳುನಟ ಹಲ್ಲೆ ನಡೆಸಿದ್ದಾರೆ.
ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ವೆಮಲ್ ಖ್ಯಾತ ನಟರಾಗಿದ್ದು ಪಸಂಗ, ಕಲವನಿ, ವಾಗೈಸೂಡ ವಾ ಹಾಗೂ ಕಲಲಪ್ಪು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
Comments are closed.