ಮನೋರಂಜನೆ

ಕಾಂಗ್ರೆಸ್ ಪರ ಒಲವಿದ್ದು, ಈ ಬಾರಿಯ ಲೋಕಸಭಾ ಚುನಾವಣೆಗೆ ನಿಲ್ಲಬೇಕೆಂದಿದ್ದೇನೆ: ಸುಮಲತಾ

Pinterest LinkedIn Tumblr

 ಬೆಂಗಳೂರು: ಮಂಡ್ಯದ ಜನತೆ, ಅಂಬರೀಶ್ ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಜನಸೇವೆಗೆ ಒಪ್ಪಿದ್ದೇನೆ ಎಂಬುದಾಗಿ ಮಾಜಿ ಸಂಸದ, ಕಾಂಗ್ರೆಸ್ ನಾಯಕರಾಗಿದ್ದ ದಿ. ಅಂಬರೀಶ್ ಪತ್ನಿ ಸುಮಲತಾ ಹೇಳಿದ್ದಾರೆ. ಈ ಮೂಲಕ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಇದೇ ವೇಳೆ ಇದಕ್ಕಾಗಿ ಯಾವುದೇ ಪೂರ್ವಯೋಜನೆ ಹಾಕಿಕೊಂಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ಅಂಬರೀಷ್ ಮೂರನೇ ತಿಂಗಳ ಪುಣ್ಯಾರಾಧನೆಯಲ್ಲಿ ಭಾಗವಹಿಸಿದ್ದ ಸುಮಲತಾ ಸುದ್ದಿಗಾರರೊಡನೆ ಮಾತನಾಡಿದ್ದಾರೆ.

“ನಾನು ಜನಸೇವೆ ಮಾಡಬೇಕೆಂದಿರುವುದು ನಿಜ, ಇದಕ್ಕಾಗಿ ಯಾವುದೇ ರಾಜಕೀಯ ತಂತ್ರಗಾರಿಕೆ, ರಣತಂತ್ರವನ್ನು ಬಳಸುವುದಿಲ್ಲ. ಸ್ಪರ್ಧೆ ಮಾಡುವುದಕ್ಕೆ ಕಾಂಗ್ರೆ ಅಥವಾ ಜೆಡಿಎಸ್ ಎನ್ನುವ ಗೊಂದಲವಿಲ್ಲ. ಆದರೆ ಕಾಂಗ್ರೆಸ್ ಪರ ಒಲವಿರುವುದು ನಿಜ” ಅವರು ಹೇಳಿದ್ದಾರೆ.

“ನಮಗೆ ನೀವು ಬೇಕು, ಯಾವ ಪಕ್ಷವಾದರೂ ಸರಿ, ಚುನಾವಣೆಗೆ ನಿಲ್ಲಿರೆಂದು ಅಭಿಮಾನಿಗಳು ನನಗೆ ಹೇಳಿದ್ದಾರೆ.ಹಾಗಾಗಿ ಮಂಡ್ಯದ ಜನತೆ ಸೇವೆ ಮಾಡಲಿಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ.

“ಅಂಬರೀಶ್ ಹಲವು ವರ್ಷಗಳ ಕಾಲ ರಾಜಕೀಯದಲ್ಲಿದ್ದರು. ಅದರಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ಸುದೀರ್ಘ ಅವಧಿವರೆಗೆ ಜನಸೇವೆ ಮಾಡಿದ್ದಾರೆ. ಹೀಗಾಗಿ ನನನ್ಗೆ ಕಾಂಗ್ರೆಸ್ ನಿಂದಲೇ ಅವಕಾಶ ಸಿಕ್ಕಬಹುದೆನ್ನುವ ನಿರೀಕ್ಷೆ ಇದೆ. ಇದುವರೆಗೆ ಈ ಬಗ್ಗೆ ಯಾರೊಡನೆ ಚರ್ಚಿಸಿಲ್ಲ” ಸುಮಲತಾ ಹೇಳಿದ್ದಾರೆ.

ಅಂಬರೀಶ್ ಅವರನ್ನು ನೆನೆದು ಭಾವುಕರಾದ ಸುಮಲತಾ” ಮಂಡ್ಯ ಕುರಿತು ಅಂಬಿಗೆ ಸಾಕಷ್ಟು ಕನಸಿತ್ತು. ಅವರ ಪ್ರೀತಿಯೇ ನನ್ನನ್ನು ಇಲ್ಲಿವರೆಗೆ ಕರೆತಂದಿದೆ.” ಎಂದು ನುಡಿದರು.

Comments are closed.