ಮನೋರಂಜನೆ

ನೆಟ್ಟಿಗರಿಗೆ ಪ್ರಿಯವಾದ ಸನ್ನಿ ಲಿಯೋನ್ ಲೇಟೆಸ್ಟ್ ಫೋಟೋ

Pinterest LinkedIn Tumblr


ಮುಂಬೈ: ಸನ್ನಿ ಲಿಯೋನ್ ಹೆಸರು ಕೇಳಿದ್ರೆ ಸಾಕು ಬಾಲಿವುಡ್ ಅಂಗಳದಲ್ಲಿ ಸಂಚಲನ ಹುಟ್ಟುತ್ತೆ. ಚಿತ್ರದಲ್ಲಿ ಸನ್ನಿಯ ಒಂದು ಝಲಕ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸನ್ನಿ ಲಿಯೋನ್ ಪ್ರತಿನಿತ್ಯ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಫೋಟೋವೊಂದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಹಳದಿ ಬಣ್ಣದ ಟಾಪ್ ಹಾಕಿ ಮೇಲೊಂದು ಜಾಕೆಟ್ ಧರಿಸಿರುವ ಸನ್ನಿ ಲಿಯೋನ್ ಫೋಟೋ ಇದೂವರೆಗೂ 4 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಬಾಲಿವುಡ್ ನಲ್ಲಿ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಗ್ಲಾಮರ್ ಗೊಂಬೆ ಸಖತ್ ಕಮಾಲ್ ಮಾಡಿದ್ದಾರೆ.

ಜಿಸ್ಮ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಸನ್ನಿ ಲಿಯೋನ್ ಸಿನಿ ಅಂಗಳದ ಬಹುಬೇಡಿಕೆಯ ನಟಿಯಾಗಿದ್ದಾರೆ. ಸಿನಿಮಾಗಳಲ್ಲದೇ ವಿಡಿಯೋ ಆಲ್ಬಂ, ರಿಯಾಲಿಟಿ ಶೋ ನಿರೂಪಕಿ, ಸಮಾಜ ಸೇವಕಿಯಾಗಿಯೂ ಸನ್ನಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸನ್ನಿ ಲಿಯೋನ್ ಭಾರತಕ್ಕೆ ಬಂದ ಮೇಲೆ ನನ್ನ ಜೀವನ ಶೈಲಿ ತುಂಬಾನೇ ಬದಲಾಗಿದೆ. ಇದೀಗ ನಾನು ಮೂರು ಮಕ್ಕಳ ತಾಯಿ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಎಂದು ಹೇಳಿಕೊಂಡಿದ್ದರು.

Comments are closed.