ಮನೋರಂಜನೆ

ರಾಜ್ ಕುಮಾರ್ ಬಯೋಪಿಕ್‌ನಲ್ಲಿ ಪುನೀತ್! ಜೋಡಿಯಾಗಲಿರುವ ಈ ಬಾಲಿವುಡ್ ನಟಿ.?

Pinterest LinkedIn Tumblr


ಎನ್‌ಟಿಆರ್‌ ಜೀವನ ಚರಿತ್ರೆ ಆಧರಿಸಿದ ಚಿತ್ರ ‘ಎನ್‌ಟಿಆರ್‌ ಕಥಾ ನಾಯಕುಡು’ ಬುಧವಾರ( ಜ.9) ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ ಸೇರಿ ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆ ಆಗುತ್ತಿದೆ. ವಿಶ್ವದಾದ್ಯಂತ ಚಿತ್ರ ತೆರೆ ಕಾಣುತ್ತಿರುವ ಪರದೆಗಳ ಸಂಖ್ಯೆ 2 ಸಾವಿರಕ್ಕೂ ಹೆಚ್ಚಿದೆ.

ಕರ್ನಾಟಕದಲ್ಲೂ ಈ ಚಿತ್ರ ಕೆಆರ್‌ಜಿ ಸ್ಟುಡಿಯೋಸ್‌ ಮೂಲಕ 100ಕ್ಕೂ ಹೆಚ್ಚು ಪರದೆಗಳಲ್ಲಿ ತೆರೆ ಕಾಣುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಬಾಲಕೃಷ್ಣ, ವಿದ್ಯಾಬಾಲನ್‌ ಸೇರಿದಂತೆ ಚಿತ್ರತಂಡ ಸೋಮವಾರ ಬೆಂಗಳೂರಿಗೆ ಆಗಮಿಸಿತ್ತು. ಟ್ರೇಲರ್‌ ಲಾಂಚ್‌ ಮತ್ತು ರಿಲೀಸ್‌ ಸುದ್ದಿಗೋಷ್ಠಿಗೆ ಪುನೀತ್‌ ರಾಜ್‌ಕುಮಾರ್‌, ಯಶ್‌ ಹಾಗೂ ಕೆಜಿಎಫ್‌ ಚಿತ್ರದ ನಿರ್ಮಾಪಕ ವಿಜಯ್‌ ಕಿರಗಂದೂರು ಅತಿಥಿಗಳಾಗಿ ಆಗಮಿಸಿದ್ದರು.

ಬಾಲಕೃಷ್ಣ ಹೇಳಿದ್ದು

‘ಎನ್‌ಟಿಆರ್‌ ಅಂದ್ರೆ ಆಂಧ್ರದ ಆಧುನಿಕ ಚರಿತ್ರೆಯ ನಿರ್ಮಾತೃ. ಅವರ ಕುರಿತು ಸಿನಿಮಾ ಮಾಡ್ಬೇಕು ಅನ್ನೋದು ದೇವರ ಇಚ್ಛೆ. ಇದು ಹೇಗೆ ಶುರುವಾಯಿತು, ಯಾಕೆ ಶುರುವಾಯಿತು, ನನ್ನ ಬಳಿ ಉತ್ತರ ಇಲ್ಲ. ದೇವರೇ ಬಂದು ತಂದೆಯ ಕುರಿತು ಸಿನಿಮಾ ಮಾಡು ಅಂತ ಹೇಳಿದಂತೆ ಇದು ಶುರುವಾಯಿತು. ಒಬ್ಬ ಸಾಮಾನ್ಯ ರೈತನ ಮಗನಾಗಿ ಹುಟ್ಟಿ, ಕಲಾವಿದನಾಗಿ, ರಾಜಕಾರಣಿಯಾಗಿ ಅವರ ಬದುಕಿನ ದಾರಿಯೇ ಒಂದು ರೋಚಕ ಕಥನ. ಅದನ್ನು ಎರಡು ಭಾಗಗಳಲ್ಲಿ ತೋರಿಸುವ ಪ್ರಯತ್ನವೇ ಈ ಚಿತ್ರ. ಮೊದಲು ಕಥಾನಾಯಕುಡು, ಆನಂತರ ಭಾಗ 2 ಮಹಾ ನಾಯಕುಡು ತೆರೆಗೆ ಬರುತ್ತದೆ’ ಎಂದಿದ್ದು ನಂದಮೂರಿ ಬಾಲಕೃಷ್ಣ.

ರಾಮ್‌ ಗೋಪಾಲ್‌ವರ್ಮ ನಿರ್ದೇಶನದ ಎನ್‌ಟಿಆರ್‌ ಸಿನಿಮಾ ಕುರಿತ ಪ್ರಶ್ನೆಗೆ ‘ ನೋ ಕಾಮೆಂಟ್ಸ್‌’ ಎಂಂದರು. ಅದಕ್ಕೂ ಮೊದಲು ಎನ್‌ಟಿಆರ್‌ ಕುಟುಂಬಕ್ಕೂ ರಾಜ್‌ ಕುಮಾರ್‌ ಕುಟುಂಬಕ್ಕೂ ಇದ್ದ ನಂಟನ್ನು ನೆನಪಿಸಿಕೊಂಡರು.

‘ರಾಜ್‌ಕುಮಾರ್‌ ಅವರು ಆಗಾಗ ಚೆನ್ನೈನಲ್ಲಿ ಎನ್‌ಟಿಆರ್‌ ಅವರನ್ನು ಭೇಟಿಯಾದಾಗೆಲ್ಲ ನಾನಿರುತ್ತಿದ್ದೆ. ಅವರನ್ನು ಹತ್ತಿರದಿಂದ ನೋಡಿದ್ದೆ. ಅವರ ಸಾಧನೆಯೂ ಬಹುದೊಡ್ಡದು. ಅವರ ಕುರಿತು ಬಯೋಪಿಕ್‌ ಬರಬೇಕು. ಆ ಪ್ರಯತ್ನವನ್ನು ಪುತ್ರರಾದ ಪುನೀತ್‌ ರಾಜ್‌ಕುಮಾರ್‌ ಮಾಡಬೇಕು’ ಎಂದು ಸಲಹೆ ಕೊಟ್ಟರು. ವೇದಿಕೆ ಮೇಲಿದ್ದ ಪುನೀತ್‌ ರಾಜ್‌ಕುಮಾರ್‌ ನಗುವೇ ಉತ್ತರ ಎಂಬಂತೆ ಬಾಲಕೃಷ್ಣ ಅವರ ಮಾತಿಗೆ ಪ್ರತಿಕ್ರಿಯಿಸಿದರು, ನಂತರ ಮಾತನಾಡಿದ ಪುನೀತ್‌ ರಾಜ್‌ಕುಮಾರ್‌, ಅಂತಹ ಅವಕಾಶ ಸಿಕ್ಕರೆ ಅದೊಂದು ಪುಣ್ಯ. ಯಾರಾದರೂ, ಅಂತಹ ಸಿನಿಮಾ ನಿರ್ಮಾಣ ಮಾಡಲು ಬಂದರೆ ತಾವು ಅಭಿನಯಿಸಲು ಸಿದ್ಧ’ ಎಂದರು.

ಇದಕ್ಕೂ ಮುಂಚೆ ವೇದಿಕೆಯಲ್ಲಿ ಯಶ್‌, ಪುನೀತ್‌ ರಾಜ್‌ಕುಮಾರ್‌ ಕಥಾ ನಾಯಕುಡು ಚಿತ್ರಕ್ಕೆ ತಮ್ಮ ಬೆಂಬಲ ಘೋಷಿಸಿದರು. ಕಲ್ಯಾಣ್‌ ರಾಮ್‌, ನಿರ್ಮಾಪಕಿ ಜಯಶ್ರೀದೇವಿ, ನಿರ್ಮಾಪಕ ಹಾಗೂ ವಿತರಕ ಸಾಯಿ ಕೋರಪಟ್ಟಿಹಾಜರಿದ್ದರು.

ಎನ್‌ಟಿಆರ್‌ ಬಯೋಪಿಕ್‌ ‘ಎನ್‌ಟಿಆರ್‌ ಕಥಾನಾಯಕುಡು’ ಚಿತ್ರದ ಕನ್ನಡ ಆವೃತ್ತಿ ತರಲು ನನಗೂ ಆಸಕ್ತಿಯಿದೆ. ಆ ಬಗ್ಗೆ ಮಾತುಕತೆ ನಡೆದಿದೆ. ಸದ್ಯಕ್ಕೆ ಯಾವುದು ಫೈನಲ್‌ ಆಗಿಲ್ಲ.- ಬಾಲಕೃಷ್ಣ

ಎಲ್ಲರಿಗೂ ನಮಸ್ಕಾರ, ಎಲ್ಲರೂ ಚೆನ್ನಾಗಿದ್ದೀರಾ ಅಂತ ಕನ್ನಡದಲ್ಲೇ ಮಾತು ಅರಂಭಿಸಿದ ವಿದ್ಯಾಬಾಲನ್‌, ‘ತೆಲುಗಿನಲ್ಲಿ ಅಭಿನಯಿಸಿದ್ದು ಇದೇ ಮೊದಲು. ಬಾಲಯ್ಯ ಸರ್‌ ಮೊದಲು ಭೇಟಿ ಆಗಿ ಕತೆ, ಪಾತ್ರದ ಬಗ್ಗೆ ಹೇಳಿದಾಗ ತುಂಬಾ ಎಕ್ಸೈಟ್‌ ಆಗಿದ್ದೆ. ತಾರಕಮ್ಮನಾಗಿ ಅಭಿನಯಿಸಿದ್ದೇನೆ. ಅವರು ಎನ್‌ಟಿಆರ್‌ ಪತ್ನಿ. ಅಂತಹ ತಾಯಿಯ ನಿಜ ಪಾತ್ರಕ್ಕೆ ಬಣ್ಣ ಹಚ್ಚಿದ್ದು ತಂದಿದೆ’ ಎಂದರು. ನೀವೇಕೆ ಕನ್ನಡಕ್ಕೆ ಬರಬಾರದು ಅಂತ ಯಶ್‌ ಹೇಳಿದಾಗ, ಅವಕಾಶ ಕೊಡಿ, ಬಂದೇ ಬರುತ್ತೇನೆ ಎಂದು ನಕ್ಕರು.

Comments are closed.