ಮನೋರಂಜನೆ

ಐಶ್ವರ್ಯರೈ ಗೆ ವಿಶ್ವಸುಂದರಿ ಕಿರೀಟದ ಸಿಹಿ ನೆನಪು

Pinterest LinkedIn Tumblr

2997aishwarya-raiಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ವಿಶ್ವಸುಂದರಿ ಕರ್ನಾಟಕ ಕರಾವಳಿಯ ಬೆಡಗಿ ಐಶ್ವರ್ಯ ರೈ ಭುವನಸುಂದರಿ ಕಿರೀಟ ಧರಿಸಿ ಇಂದಿಗೆ ಬರೋಬ್ಬರಿ 21 ವರ್ಷಗಳು ಕಳೆದಿವೆ.

ಈ ಹಿನ್ನೆಲೆಯಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಐಶ್ವರ್ಯ ರೈ ಇಂತಹ ಜಾಗತಿಕ ದಾಖಲೆಯ ಪಟ್ಟ ನನಗೆ ದೊರಕಿದ್ದು ಅತ್ಯಂತ ಖುಷಿಯಾದ ಸಂದರ್ಭವಾಗಿತ್ತು ಎಂದು ತನ್ನ ಅನಿಸಿಕೆ ಹಂಚಿಕೊಂಡಿದ್ದಾಳೆ.

ಇದು ನನ್ನ ಜೀವನದಲ್ಲಿ ಒದಗಿ ಬಂದ ಅತ್ಯಂತ ಅಭೂತಪೂರ್ವವಾದ ಒಂದು ಸುಸಂದರ್ಭ ಎಂದು ನಾನು ಯಾವತ್ತೂ ಭಾವಿಸಿದ್ದೇನೆ. ಇಡೀ ವಿಶ್ವದ ಎದುರು ಸೌಂದರ್ಯ ರಾಣಿ ಎಂಬ ಪಟ್ಟ ಏರಿ ಕಿರೀಟ ಧರಿಸಿದ ನನಗೆ ಅದೊಂದು ಸದಾ ಮನಸ್ಸಿನಲ್ಲಿರುವ ಸುಂದರ ಸ್ವಪ್ನ ಎಂದು ಹೇಳಿದ್ದಾಳಂತೆ.

ಇಂತಹ ಒಂದು ಅದ್ಭುತ ಅವಕಾಶ ನನಗೆ ಒದಗಿ ಬರುತ್ತದೆ ಎಂಬ ಪರಿಕಲ್ಪನೆಯೇ ನನ್ನಲ್ಲಿರಲಿಲ್ಲ  ಎಂಬುದು ಅವರ ಅನುಭವ.

Write A Comment