ಮನೋರಂಜನೆ

ಬಾಲಿವುಡ್ ನಟನಿಗೆ ಸವಾಲು ಹಾಕಿದ WWE ಬಟಿಸ್ಟಾ!

Pinterest LinkedIn Tumblr

The-Animal-Dave-Batistaವರ್ಲ್ಡ್‌ ರೆಸ್ಲಿಂಗ್‌ ಎಂಟರ್‌ಟೇನ್‌ಮೆಂಟ್‌ನಲ್ಲಿ ಹೆಸರುವಾಸಿಯಾಗಿರುವ  ವಿಶ್ವ ಹೆವಿವೇಟ್‌ ಚಾಂಪಿಯನ್‌ ಡೇವ್ ಬಟಿಸ್ಟಾ ಬಾಲಿವುಡ್ ನಟ ವರುಣ್ ಧವನ್’ಗೆ ಸವಾಲು ಹಾಕಿದ್ದಾರೆ.

ಬಟಿಸ್ಟಾ ಬಾಲಿವುಡ್ ಮಸೆಲ್ ಮ್ಯಾನ್ ಆಗಿರುವ ವರುಣ್ ಧವನ್’ಗೆ ಪುಲ್ ಅಪ್ ಚಾಲೆಂಜ್ ನೀಡಿದ್ದಾರೆ. ಫಿಟ್ ನೆಸ್ ಬಗ್ಗೆ ಕಾಳಜಿವಹಿಸುವ ವರುಣ್ ತನ್ನಂತೆ ಫಿಟ್ ನೆಸ್ ಮಾಡಿಕೊಳ್ಳುತ್ತಾರೆಯೇ ಎಂದು ಹೇಳಿಕೆ ನೀಡಿ ಸವಾಲು ನೀಡಿದ್ದಾರೆ.

ಸವಾಲನ್ನು ಸ್ವೀಕರಿಸಿರುವ ಬದ್ಲಾಪುರ್, ABCD, ಮೈತೇರ ಹೀರೊ ಚಿತ್ರದ ನಾಯಕ ವರುಣ್ ಧವನ್  ನಾಳೆ ಉತ್ತರ ನೀಡುವುದಾಗಿ ತಮ್ಮ ಟ್ವೀಟರ್’ನಲ್ಲಿ ತಿಳಿಸಿದ್ದಾರೆ.

ಸದ್ಯ ಡೇವ್ ಬಟಿಸ್ಟಾ WWEಯಿಂದ ಹೊರಬಂದು ಹಾಲಿವುಡ್ ಬಾಂಡ್ ಸಿರೀಸ್ ಚಿತ್ರ ‘ಸ್ಪೆಕ್ಟ್ರೆ’ದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
*ಕಪ್ಪು ಮೂಗುತ್ತಿ
-ಉದಯವಾಣಿ

Write A Comment