ಮನೋರಂಜನೆ

ಬಾಲಿವುಡ್ ನ ಹಿರಿಯ ನಟ ಸಯೀದ್ ಜಫ್ರಿ ವಿಧಿವಶ

Pinterest LinkedIn Tumblr

sayeedಮುಂಬೈ: ತಿಂಗಳುಗಳ ಕಾಲ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ಬಾಲಿವುಡ್ ನ ಹಿರಿಯ ನಟ ಸಯೀದ್ ಜಫ್ರಿ (86) ಭಾನುವಾರ ಸಾವನ್ನಪ್ಪಿದ್ದಾರೆ. ಬಾಲಿವುಡ್ ನ ಹಲವು ಸಿನಿಮಾಗಳಲ್ಲಿನ ಜೆಫ್ರಿ ಅಭಿನಯ ಮರೆಯಲಾರದಂತಹದ್ದಾಗಿದೆ.

1977ರಲ್ಲಿ ಬಿಡುಗಡೆ ಕಂಡ ಶತರಂಜ್ ಕಿ ಕಿಲಾಡಿ, ಹೀನಾ(1991), ರಾಮ್ ತೇರಿ ಗಂಗಾ ಮೈಲಿ(1985), ಮಾಸೂಮ್(1983) ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿನ ಸಯೀದ್ ಅಭಿನಯ ಅಮೋಘವಾಗಿತ್ತು. ಜಫ್ರಿ ನಿಧನದ ಸುದ್ದಿಯನ್ನು ಭಾನುವಾರ ಶಾಹೀನ್ ಅಗರ್ ವಾಲ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು.

ತಮ್ಮ ನೆಚ್ಚಿನ ನಟನ ನಿಧನಕ್ಕೆ ಅಭಿಮಾನಿಗಳು ಫೇಸ್ ಬುಕ್ ನಲ್ಲೇ ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. 2011ರವರೆಗೂ ಜಫ್ರಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದರು. 1950ರ ದಶಕದಲ್ಲಿ ದೆಹಲಿಯಲ್ಲಿ ಇಂಗ್ಲಿಷ್ ರಂಗಭೂಮಿಯ ಗುಂಪನ್ನು ಕಟ್ಟಿಕೊಂಡು ರಂಗಚಟುವಟಿಕೆ ನಡೆಸುತ್ತಿದ್ದರು.

ಜಫ್ರಿ ಹಲವು ಬ್ರಿಟಿಷ್ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಹೀನಾ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಜಫ್ರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು. ಜಫ್ರಿ ಮೊದಲ ಹೆಂಡತಿ ಮಧುರ್, ನಂತರ ಜೆನ್ನಿಫರ್ ಅವರನ್ನು ಮದುವೆಯಾಗಿದ್ದರು.
-ಉದಯವಾಣಿ

Write A Comment