ಮನೋರಂಜನೆ

ಕರೀನಳ 2 ಚಿತ್ರ ರೆಡಿ

Pinterest LinkedIn Tumblr

kareena

ಬಾಲಿವುಡ್‌ನಲ್ಲಿ ಎಲ್ಲ ನಟ-ನಟಿಯರ ಚಿತ್ರಗಳಿಗೆ ಬೇರೆ ನಟ-ನಟಿಯರ ಚಿತ್ರಗಳು ಬಿಡುಗಡೆ ವೇಳೆ ತೊಡರುಗಾಲಾದರೆ, ನಮ್ಮ ಬಳುಕುವ ಬಳ್ಳಿಯಂಥ ಕರೀನಾ ಕಪೂರ್‌ಖಾನ್ ಎಂಬ ಸುಂದರಿಗೆ ಒಂದು ಚಿತ್ರ ಬಿಡುಗಡೆಗೆ ರೆಡಿಯಾಗ್ತಿದ್ರೆ ಅವಳದ್ದೇ ಇನ್ನೊಂದು ಚಿತ್ರವೂ ರೆಡಿಯಾಗಿ ನಾ ಮುಂದು,

ತಾ ಮುಂದು ಅಂತ ತುದಿಗಾಲಲ್ಲಿ ನಿಂತಿವೆಯಂತೆ. ಒಂದರ ಹಿಂದೊಂದು ಎರಡೂ ಚಿತ್ರಗಳೂ ಈಗ ಬಿಡುಗಡೆಗೆ ತಯಾರಾಗಿದ್ದು, 2016ನೆ ಸಾಲಿನ ಬೇಸಿಗೆ ದಿನಗಳಲ್ಲಿ ಕರೀನಾ ಕಪೂರ್‌ಖಾನ್‌ಳ ‘ಕಿ ಔರ್ ಕ’ ಹಾಗೂ ‘ಉದ್‌ತಾ ಪಂಜಾಬ್’ ಎಂಬ ಎರಡೂ ಚಿತ್ರಗಳೂ ಕ್ಯೂ ನಿಂತಿವೆಯಂತೆ.

ಈ ಮೊದಲು ಉದ್ ತಾ ಪಂಜಾಬ್ ಜನವರಿಗೆ ಬಿಡುಗಡೆಯಾಗ ಬೇಕಾಗಿತ್ತು. ಆದರೆ, ಏಪ್ರಿಲ್‌ಗೆ ಮುಂದೆ ಹೋಗಿದೆಯಂತೆ. ಏಪ್ರಿಲ್‌ನಲ್ಲಿ ಕ್ರಿಕೆಟ ಮ್ಯಾಚ್‌ಗಳು ನಡೆಯೋದ್ರಿಂದ ಆಗ ಬೇರೆ ಚಿತ್ರಗಳು ಬಿಡಗಡೆ ಆಗುವುದಿಲ್ಲ. ಹಾಗಾಗಿ ಆಗಲೇ ಇದನ್ನೂ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರಂತೆ. ಏಪ್ರಿಲ್, ಮೇನಲ್ಲಿ ಎರಡೂ ಚಿತ್ರ ಬಿಡುಗಡೆಯಾಗಲಿವೆ.

Write A Comment