ಕರ್ನಾಟಕ

ಮಾದಾಪುರದಲ್ಲಿ ಕುಟ್ಟಪ್ಪ ಅಂತ್ಯಕ್ರೀಯೆ : ಕುಟುಂಬಕ್ಕೆ 5 ಲಕ್ಷ ಪರಿಹಾರ

Pinterest LinkedIn Tumblr

kuttappaಮಡಿಕೇರಿ. ನ. 11 ; ನಿನ್ನೆ ಘರ್ಷಣೆಯಲ್ಲಿ ಮೃತಪಟ್ಟಿದ್ದ ವಿಹೆಚ್ ಪಿ ಮುಖಂಡ ಕುಟ್ಟಪ್ಪನವರ ಅಂತ್ಯಕ್ರೀಯೆ  ಪೋಲೀಸ್ ಬಿಗಿ ಬಂದೋಬಸ್ತಿನಲ್ಲಿ  ಅವರ ಹುಟ್ಟೂರಾದ ಸೋಮವಾರಪೇಟೆ ತಾಲ್ಲೂಕಿನ  ಮಾದಾಪುರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕುಟುಂಬದವರ ರೋಧನ ಮುಗಿಲು ಮುಟ್ಟುವಂತಿತ್ತು  ಟಿಪ್ಪು ಜಯಂತಿಯನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಮಂಗಳವಾರ ಕರೆ ನೀಡಿದ್ದ ಕೊಡಗು ಬಂದ್‌ ಸಂದರ್ಭ ಮಡಿಕೇರಿಯಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ದಲ್ಲಿ ಗಾಯಗೊಂಡು ಮೃತ ಪಟ್ಟಿರುವ ವಿಶ್ವಹಿಂದೂ ಪರಿಷತ್‌ನ ಜಿಲ್ಲಾ ಸಂಘಟನ ಕಾರ್ಯದರ್ಶಿ ದೇವಪಂಡ ಕುಟ್ಟಪ್ಪ   ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಬುಧವಾರ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಸಾವಿಗೆ ಸಂಬಂಧಿಸಿ ಅನೇಕ ಗೊಂದಲಗಳಿದ್ದುಈ ಕುರಿತು ಪ್ರಾದೇಶಿಕ ಆಯುಕ್ತರ ನೇತ್ರತ್ವದಲ್ಲಿ ಸೂಕ್ತ ತನಿಖೆ ನಡೆಸುತ್ತೇವೆ  ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

Write A Comment