ಅಂತರಾಷ್ಟ್ರೀಯ

ಪಾಕಿಸ್ತಾನದ ಇಮ್ರಾನ್‍ಖಾನ್‍ಗೆ ರೆಹಾಂ ಯಾಕೆ ಬೇಡವಾದ್ಲು ಗೊತ್ತೇ ? ನಾಯಿಯೊಂದು ಇಬ್ಬರ ಮಧ್ಯೆ ವಿರಸಕ್ಕೆ ಕಾರಣವಾದದ್ದು ಹೇಗೆ..? ಇಲ್ಲಿದೆ ಓದಿ…

Pinterest LinkedIn Tumblr

Imran_Khan_with_Rahem_married

ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್‍ಖಾನ್‍ಗೆ ರೆಹಾಂ ಯಾಕೆ ಬೇಡವಾದ್ಲು? ಪಾಕ್‍ನಲ್ಲಿ ಪೂರ್ತಿ ಈ ಚರ್ಚೆ. ಗಂಡನ ರಾಜಕೀಯ ಇಮೇಜನ್ನು ತನ್ನದಾಗಿಸಿಕೊಳ್ಳಲು ಯತ್ನಿಸಿದ್ದಳು ರೆಹಾಂ ಅನ್ನೋ ಆರೋಪ ಹಳೆಯದಾಯ್ತು. ಈಗ ಇವರ ವಿರಸದ ಮಧ್ಯೆ ನಾಯಿಯ ಪ್ರವೇಶವಾಗಿದೆ!

ಇಮ್ರಾನ್ ಒಂದು ಮುದ್ದಿನ ನಾಯಿ ಸಾಕಿದ್ದಾನಂತೆ. ಇಮ್ರಾನ್ ಬೆಡ್‍ರೂಮ್ ಗೆ ಬಂದಾಗ ಅದೂ ಬಂದು, ಅವನ ಪಕ್ಕ ಮಲಗುತ್ತಿತ್ತಂತೆ. ಇದು ಯಾವ ಹೆಂಡ್ತಿಗೂ ಬೇಸರ ಆಗೋ ವಿಚಾರನೇ! ರೆಹಾಂ ಇದನ್ನೇ ಅನೇಕ ಸಲ ವಿರೋಧಿಸಿ, ಜಗಳ ತೆಗೆದಿದ್ದಾಳೆ. ಅಷ್ಟೇ ಅಲ್ಲ, ರೆಹಾಂ ಸಣ್ಣ ಮಗಳು ಕೂಡ ಇವರೊಟ್ಟಿಗೆ ವಾಸಿಸುತ್ತಿದ್ದಳು. ಇಮ್ರಾನ್ ಆಕೆಯ ಮೇಲೆ ಪ್ರೀತಿಯನ್ನೇ ತೋರುತ್ತಿರಲಿಲ್ಲ. ರೆಹಾಂ ಸಂಬಂಧಿಕರು ಯಾರೇ ಬಂದ್ರೂ ಇಮ್ರಾನ್‍ನ ಸಹೋದರಿ ಅವರೆಲ್ಲ ಸರಿಯಾಗಿ ಆತಿಥ್ಯ ಕೊಡುತ್ತಿರಲಿಲ್ಲ ಎನ್ನುವ ಮಾತೂ ಕೇಳಿಬಂದಿದೆ.

ಅಂದಹಾಗೆ, ಇಮ್ರಾನ್ ತಲಾಖ್ ರವಾನಿಸಿದ್ದು ಇಮೇಲ್ ಮೂಲಕ. ಇಮ್ರಾನ್ ಆಪ್ತ ಕಾರ್ಯದರ್ಶಿಯಿಂದ ಈ ಬಗ್ಗೆ ಮೊಬೈಲ್ ಕರೆ ಬಂದ ಕೂಡಲೇ ರೆಹಾಂ ಪಾಕಿಸ್ತಾನ ತೊರೆದಿದ್ದಾಳೆ. ಇಂಗ್ಲೆಂಡಿನ ಬರ್ಮಿಂಗ್‍ಹ್ಯಾಮ್ ಗೆ ಬಂದು ನೆಲೆಸಿದ್ದಾಳೆ. ಒಟ್ಟಿನಲ್ಲಿ ಬಿಬಿಸಿಯ ಮಾಜಿ ವೆದರ್ ರಿಪೋರ್ಟರ್ ರೆಹಾಂಗೆ ತನ್ನ ವಾತಾವರಣವೇ ಸರಿಯಿಲ್ಲ ಅಂತನ್ನಿಸುತ್ತಿದೆ.

Write A Comment