ಕನ್ನಡ ವಾರ್ತೆಗಳು

ಲಕುಮಿ ತಂಡದ ಮುಂಬಯಿ ಪ್ರವಾಸಕ್ಕೆ ತೆರೆ: ಬಾಷೆಯಲ್ಲಿ ಸಂಸ್ಕೃತಿ ಒಳಗೊಂಡಿದೆ – ಆರ್. ಕೆ. ನಾಯರ್,ಉಮ್ಮರ್ ಗಾಂವ್

Pinterest LinkedIn Tumblr

Lakumi_team_mumbai_1

ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಕಳೆದ ಹದಿನೈದು ದಿನಗಳಿಂದ ನಗರ ಹಾಗೂ ಉಪನಗರಗಳಲ್ಲಿ ಯಶಸ್ವೀ ನಾಟಕ ಪ್ರದರ್ಶನ ನೀಡಿದ ಮಂಗಳೂರಿನ ಲ. ಕಿಶೋರ್ ಡಿ. ಶೆಟ್ಟಿಯವರ ಯಜಮಾನಿಕೆಯ ಲಕುಮಿ ತಂಡದ ಕುಸೆಲ್ದ ಕಲಾವಿದರ ಈ ವರ್ಷದ ಮುಂಬಯಿ ಪ್ರವಾಸದ ಸಮಾರೋಪ ಸಮಾರಂಭ್ವು ನ. 8 ರಂದು ಮಾಟುಂಗಾದ ವಿಶ್ವೇಶ್ವರಯ್ಯ ಸಭಾಗೃದಲ್ಲಿ, ನಡೆಯಿತು.

ನಾಟಕದ ಕೊನೆಯ ಪ್ರದರ್ಶನ ಅಂಗವಾಗಿ ನಡೆದ ಸಭಾಕಾರ್ಯಕ್ರಮದಲ್ಲಿ ತಂಡದ ಈ ವರ್ಷದ ವಿನೂತನ ನಾಟಕ ಬದ್ಕೆರೆಗಾದ್ ದಿನನಿತ್ಯ ಸೈಪಿನಕುಲು ನಾಟಕದ ಲೇಖಕ, ಯುವ ನಟ ತುಳಸೀದಾಸ್ ಮಂಜೇಶ್ವರ ಅವರನ್ನು ಸನ್ಮಾನಿಸಲಾಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಿಲ್ವಾಸದ ಉಮ್ಮರ್ ಗಾಂವ್ ನ ಖ್ಯಾತ ಉಧ್ಯಮಿ, ಅಯ್ಯಪ್ಪ ದೇವರ ಭಕ್ತ ಆರ್. ಕೆ. ನಾಯರ್ ಮಾತನಾಡುತ್ತಾ ತುಳು ರಂಗಭೂಮಿಯಲ್ಲಿ ಹೊಸತನವನ್ನು ಸೃಷ್ಟಿಸಿದ ಲಕುಮಿ ತಂಡದ ನಾಟಕಗಳು ನಮ್ಮ ಬಾಷೆ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರಮಿಸಿದೆ. ತುಳು ನಾಡು ನಿಸರ್ಗ ಸೌಂದರ್ಯದ ಬೀಡು. ಇಲ್ಲಿಯ ಸಂಸ್ಕೃತಿ ಸಂಸ್ಕಾರ ನಮ್ಮ ಬದುಕಿಗೆ ಆದರ್ಶವಾಗಿದೆ. ತುಳು ನಾಟಕ ನೋಡುವ ಮೂಲಕ ನಮ್ಮ ತುಳು ಬಾಷೆಯು ಮತ್ತಷ್ಟೂ ಶುದ್ಧಿಕರಣವಾಗುತ್ತಿದೆ. ಸಿನೆಮಾದ ನಗು ಮತ್ತು ಕಣ್ಣೀರು ಅದು ಕೃತಕವಾದದ್ದು. ನಾಟಕದಲ್ಲಿ ಮಾತ್ರ ನೈಜತೆ ತುಂಬಿದೆ. ಇಂತಹ ಪ್ರಭುದ್ವತೆಯನ್ನು ತುಂಬಿರುವ ನಮ್ಮ ರಂಗಭೂಮಿಯನ್ನು, ಕಲೆ ಮತ್ತು ಕಲಾವಿದರನ್ನು ಗೌರವಿಸುವ ಅಗತ್ಯವಿದೆ. ಬಾಷೆಯಲ್ಲಿ ಸಂಸ್ಕೃತಿ ಒಳಗೊಂಡಿದೆ ಎಂದರು.

Lakumi_team_mumbai_2 Lakumi_team_mumbai_3 Lakumi_team_mumbai_4 Lakumi_team_mumbai_5 Lakumi_team_mumbai_6 Lakumi_team_mumbai_7 Lakumi_team_mumbai_8 Lakumi_team_mumbai_9 Lakumi_team_mumbai_10 Lakumi_team_mumbai_11 Lakumi_team_mumbai_12 Lakumi_team_mumbai_13 Lakumi_team_mumbai_14 Lakumi_team_mumbai_15

ಆಶೀರ್ವಚನ ನೀಡಿದ ಸಾಯನ್ ನ ಯುವ ಪುರೋಹಿತ ಎಂ.ಜೆ. ಪ್ರವೀಣ್ ಭಟ್ ಮೂಡುಬಿದ್ರೆ ಯವರು ಕಲಾವಿದರಿಗೆ ಗೌರವಿಸುವ ಈ ಪುಣ್ಯದ ಕಾರ್ಯ ಸರಸ್ವತಿಯ ಪೂಜೆಯನ್ನು ಮಾಡಿದ ಫಲ ಇದ್ದಂತೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ವೀಕ್ಷಕರಿಗೆ ದೇವರ ಅನುಗ್ರಹವಿದೆ. ದೂರದ ಮಂಗಳೂರಿನಿಂದ ನಮ್ಮನ್ನು ರಂಜಿಸಿ ಮನದಣಿಸಿದ ಲಕುಮಿ ತಂಡ ಎಲ್ಲಾ ಕಲಾವಿದರಿಗೆ ಶ್ರೇಯಸ್ಸು ಆಗಲಿ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಂಟ್ಸ ಸಂಘ ಮುಂಬಯಿಯ ಮಾಜಿ ಗೌ. ಪ್ರ. ಕಾರ್ಯದರ್ಶಿ ಸಿ. ಎ. ಸದಾಶಿವ ಶೆಟ್ಟಿ ಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನಮ್ಮನ್ನು ನಗಿಸುದಕ್ಕಾಗಿ ತಮ್ಮ ಅಪೂರ ಅಭಿನಯವನ್ನು ಮಾಡುತ್ತಿರುವ ಕಲಾವಿದರ ಬದುಕು ನಿರಂತರ ನಗಿಸುವಂತೆ ಸಂತೋಷದಿಂದಿರುವಂತೆ ನಾವೆಲ್ಲರೂ ಸಹಕರಿಸಬೇಕು. ನಾಟಕವನ್ನು ಕೇವಲ ಮನೋರಂಜನೆಯಾಗಿ ಸ್ವೀಕರಿಸದ ನಮ್ಮ ಬದುಕಿಗೆ ಆದರ್ಶವಾಗುವಂತೆ ಆಲಿಸಬೇಕು ಎಂದರು.

ವೇದಿಕೆಯಲ್ಲಿ ಅಂದೇರಿಯ ಶ್ರೀ ಅಯ್ಯಪ್ಪ ಭಕ್ತ ವೃಂದದ ಸಂಸ್ಥಾಪಕ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ, ಬೈಕಲ ಪ್ರಿಯಾ ಹೋಟೇಲಿನ ಬನ್ನಂಜೆ ಯಶವಂತ ಶೆಟ್ಟಿ, ಸಮಾಜ ಸೇವಕ ಉದಯ ಶೆಟ್ಟಿ,ಕಾಂತವರ, ತಂಡದ ಯಜಮಾನ ಲ. ಕಿಶೋರ್ ಡಿ. ಶೆಟ್ಟಿ, ಅಮರ್ ನಾಥ್ ಗರುಡಾ ಬಾರ್ & ರೆಸ್ಟೋರೆಂಟ್,ಪ್ರಸಾದ್ ಶೆಟ್ಟಿ, ಸಂಕಲಕರಿಯ, ಕರ್ನಾಟಕ ಮಹಾ ಮಂಡಲ, ಮೀರಾ ಭಾಯಂದರ್ ಅಧ್ಯಕ್ಷರಾದ ರವಿಕಾಂತ್ ಶೆಟ್ಟಿ, ಮಂಗಳೂರಿನ ಜೀತನ್ ಕಲೀಲ್ಸ್, ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ತಂಡದ ಯಜಮಾನ ಇತ್ತೀಚೆಗೆ ತೆರೆಗೊಂಡು ಯಶಸ್ವಿ ಪ್ರದರ್ಶನಗೊಂಡ ಯೆಕ್ಕಸಕ ತುಳು ಚಿತ್ರದ ನಿರ್ಮಾಪಕ ಲ. ಕಿಶೋರ್ ಡಿ ಶೆಟ್ಟಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ತುಳು ರಂಗಭೂಮಿಗೆ ವಿಶೇಷವಾದ ಕೊಡುಗೆಯನ್ನು ನೀಡುತ್ತಾ ಬಂದವರು ಮುಂಬಯಿಯ ತುಳು ಕಲಾಭಿಮಾನಿಗಳು. ನಮ್ಮ ತಂಡ ಪ್ರಾರಂಭದ ದಿನಗಳಿಂದಲೂ ಮುಂಬಯಿಗೆ ಆಗಮಿಸಿದಾಗ ನಾಟಕವನ್ನು ವೀಕ್ಷಿಸಿ ಪ್ರೋತ್ಸಾಹಿಸಿದ್ದಾರೆ. ಮುಂದಿನ ದಿನಗಳಲ್ಲೂ ನಮ್ಮ ತಂಡದ ಮೇಲಿಟ್ಟಿರುವ ಅಭಿಮಾನ ಮತ್ತು ಗೌರವವನ್ನು ನಾವು ಸದಾ ಅಬಾರಿಗಳಾಗಿರುತ್ತೇವೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಣ್ಯರು ತಂಡದ 23 ಕಲಾವಿದರಿಗೆ ಪ್ರಕಾಶ ಶೆಟ್ಟಿಯವರ ಕೊಡಮಾಡಿದ ತಲಾ ಒಂದು ಸಾವಿರ ನಗದು, ಸ್ಮರಣಿಕೆ ಮತ್ತು ಶಾಲು ಹೊದಿಸಿ ಗೌರವಿಸಿದರು.

ಗಣ್ಯರಿಗೆ ತಂಡದ ಮುಂಬಯಿ ಸಂಚಾಲಕ ಪ್ರಕಾಶ್ ಶೆಟ್ಟಿ ಸುರತ್ಕಲ್ ಮತ್ತು ನಾಟಕದ ವ್ಯವಸ್ಥಾಪಕರಾದ ರೂಪೇಶ್ ಶೆಟ್ಟಿ, ಸಾಣೂರು, ಶೇಖರ ಶೆಟ್ಟಿ ಲಲಿತ್ ಬಾರ್ ಮತ್ತು ಪ್ರಕಾಶ್ ಶೆಟ್ಟಿ, ಲಲಿತ್ ಬಾರ್ ಅವರು ಹೂಗುಚ್ಚ ನೀಡಿ ಗೌರವಿಸಿದರು.

ನಾಟಕ ಪ್ರದರ್ಶನಕ್ಕೆ ವಿಶೇಷ ಸಹಕಾರ ನೀಡಿದನಿತ್ಯಾನಂದ ಕ್ಯಾಟರರ್ಸ್ ನ ಐಕಳ ವಿಶ್ವನಾಥ ಶೆಟ್ಟಿ, ಸದಾಶಿವ ಶೆಟ್ಟಿ ಬಂಟ್ವಾಳ, ಲೋಕನಾಥ ಶೆಟ್ಟಿ ವಿಟ್ಲ, ರಮೇಶ್ ಪಡೀಲ್, ವಸಂತ್ ಪೂಜಾರಿ ನಿಟ್ಟೆ,ಸುರೇಶ್ ಪೂಜಾರಿ ಕಡಂದಲೆ, ರಾಜೇಶ್ ಮೊಗವೀರ ಬೈಂದೂರು, ನಾಗರಾಜ್ ಗುರುಪುರ ಅವರನ್ನು ಹೂಗುಚ್ಚ ನೀಡಿ ಗೌರವಿಸಲಾಯಿತು ಹಾಗೂ ಈ ವರ್ಷದ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವ ಸ್ವೀಕರಿಸಿದ ದೀಕ್ಷಾ ದೇವಾಡಿಗರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಕಲಾ ಸಂಘಟಕ ಕರ್ನೂರು ಮೋಹನ್ ನಿರೂಪಿಸಿ ಅಬಾರ ಮನ್ನಿಸಿದರು. ಆ ಬಳಿಕ“ಬದ್ಕೆರೆಗಾದ್ ದಿನನಿತ್ಯ ಸೈಪಿನಕುಲು” ನಾಟಕ ಪ್ರದರ್ಶನಗೊಂಡಿತು.

Write A Comment