ಮನೋರಂಜನೆ

ನಕಲಿ ದಾಖಲೆ: ಶಿಕ್ಷೆಗೆ ಬೆದರಿದ 1,400 ಶಿಕ್ಷಕರ ರಾಜೀನಾಮೆ

Pinterest LinkedIn Tumblr

fakeಪಟನಾ: ನಕಲಿ ಅಥವಾ ಸುಳ್ಳು ಶೈಕ್ಷಣಿಕ ಅರ್ಹತಾ ಪತ್ರಗಳನ್ನು ನೀಡಿ, ಕೆಲಸ ಗಿಟ್ಟಿಸಿಕೊಂಡಿರುವ 1,400 ಶಿಕ್ಷಕರು ಈಗ ಶಿಕ್ಷೆಗೆ ಹೆದರಿ ತಾವಾಗಿಯೇ ರಾಜೀನಾಮೆ ನೀಡಿದ್ದಾರೆ.

‘ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಜು.9ರವರೆಗೆ ಗಡುವು ನೀಡಿದ್ದು, ಇನ್ನೂ ಹಲವು ಶಿಕ್ಷಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ,’ ಎಂದು ಶಿಕ್ಷಣ ಇಲಾಖೆಯ ವಿನೋದಾನಂದ್‌ ಝಾ ಹೇಳಿದ್ದಾರೆ.

‘ಸುಳ್ಳು ಅಥನಾ ನಕಲಿ ಶೈಕ್ಷಣಿಕ ಅರ್ಹತಾ ಪತ್ರಗಳನ್ನು ನೀಡಿ, ರಾಜ್ಯದಲ್ಲಿ ಕೆಲಸ ಪಡೆದಿರುವ ಶಾಲಾ ಶಿಕ್ಷಕರು ವಾರದೊಳಗೆ ರಾಜೀನಾಮೆ ನೀಡಬೇಕು. ಈ ಸಂಬಂಧ ಎರಡು ದಿನಗಳೊಳಗೆ ಸಾರ್ವಜನಿಕ ಸುತ್ತೋಲೆ ಹೊರಡಿಸಬೇಕು,’ ಎಂದು ಪಟನಾ ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ ಶಿಕ್ಷಕರು ರಾಜೀನಾಮೆ ನೀಡುತ್ತಿದ್ದಾರೆ.

ಮುಖ್ಯ ನ್ಯಾಯಾಧೀಶ ಎಲ್.ನರಸಿಂಹ ರೆಡ್ಡಿ ಮತ್ತು ನ್ಯಾ.ಸುಧೀರ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ‘ಸುಳ್ಳು ಅಥವಾ ನಕಲಿ ಅರ್ಹತಾ ಶೈಕ್ಷಣಿಕ ಪತ್ರಗಳನ್ನು ಆಧರಿಸಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ, ಎಂದು ಖುದ್ದು ಶಿಕ್ಷಣ ಸಚಿವರೇ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಅಂಥ ಶಿಕ್ಷಕರು ಇನ್ನೂ ಸೇವೆಯಲ್ಲಿ ಮುಂದುವರಿಯುತ್ತಿರುವುದು ಆಶ್ಚರ್ಯ,’ ಎಂದು ನ್ಯಾಯಪೀಠ ಹೇಳಿತ್ತು.

ಇದೇ ಪೀಠ ಮೇ 18, 2015ರಂದು ಇಂಥ ನೇಮಕದ ಬಗ್ಗೆ ವಿಚಕ್ಷಣಾ ತನಿಖೆ ನಡೆಸಬೇಕೆಂದು ತೀರ್ಪು ನೀಡಿತ್ತು. ಸುಮಾರು ಮೂರು ಲಕ್ಷ ಶಿಕ್ಷಕರ ಪ್ರಮಾಣ ಪತ್ರಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದರು.

Write A Comment