ಮನೋರಂಜನೆ

ಖ್ಯಾತ ಹಿಂದಿ ಕಿರುತೆರೆ ನಟ ಸಂಜಿತ್ ಬೇಡಿ ನಿಧನ

Pinterest LinkedIn Tumblr

Sanjit-Bediನವದೆಹಲಿ: ಹಿಂದಿ ಕಿರುತೆರೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಉಮಿ ಎಂದೇ ಖ್ಯಾತಿಗಳಿಸಿದ್ದ ನಟ ಸಂಜಿತ್ ಬೇಡಿ ಅವರು ಮಂಗಳವಾರ ಅಕಾಲಿಕ ಮರಣವಪ್ಪಿದ್ದಾರೆಂದು ತಿಳಿದುಬಂದಿದೆ.

ಸಂಜಿತ್ ಬೇಡಿ ಅವರು ಮಿದುಳು ವೈರಸ್ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ದಿನಕಳೆಯುತ್ತಿದ್ದಂತೆ ರೋಗ ಮತ್ತಷ್ಟು ಉಲ್ಪಣಗೊಂಡ ಕಾರಣ ಸಂಜಿತ್ ಬೇಡಿ ಅವರು ಕೆಲವು ದಿನಗಳ ಹಿಂದೆ ಕೋಮಾಗೆ ಜಾರಿದ್ದರು.

ಸಂಜಿತ್ ಬೇಡಿ ಅವರು ಹಿಂದಿಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಸಂಜೀವಾಣಿ ಎಂಬ ಧಾರಾವಾಹಿಯ ಮೂಲಕ ಎಲ್ಲರ ಮನಗೆದಿದ್ದರು. ಅಲ್ಲದೆ, ಜಾನೆ ಕ್ಯಾ ಬಾತ್ ಹುಯಿ, ತೊಡಿ ಸಿ ಜಮೀನ್ ತೊಡ ಸಾ ಆಸ್ಮಾನ್, ಕ್ಯಾ ಹೋಗ ನಿಮ್ಮೋ ಕಾ, ಕಸೌತಿ ಜಿಂದಗಿ ಕೆ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿ ಕಿರುತೆರೆ ರಂಗದಲ್ಲಿ ಖ್ಯಾತಿ ಗಳಿಸಿದ್ದರು. ಸಂಜಿತ್ ಬೇಡಿ ಅವರ ಹಠಾತ್ ನಿಧನಕ್ಕೆ ಹಿಂದಿ ಕಿರುತೆರೆ ಲೋಕ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದಿದೆ.

Write A Comment