ಮನೋರಂಜನೆ

ಲಕ್ಷ್ಮಣ ಚಿತ್ರಕ್ಕೆ ಮೇಘನಾ ರಾಜ್ ನಾಯಕಿ?

Pinterest LinkedIn Tumblr

meghanaನಿರ್ದೇಶಕ ಆರ್. ಚಂದ್ರು ಲಕ್ಷ್ಮಣ ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೇಲರ್ ನ್ನು  ಕಳೆದ ತಿಂಗಳೇ ಬಿಡುಗಡೆ ಮಾಡಿದ್ದರಾದರೂ ನಾಯಕಿ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈಗ ಲಕ್ಷ್ಮಣ ಚಿತ್ರದ ನಾಯಕಿ ಸುಳಿವು ಸಿಕ್ಕಿದ್ದು ಮೇಘನಾ ರಾಜ್ ಎಂದು ಹೇಳಲಾಗುತ್ತಿದೆ.

ರಾಜಕಾರಣಿ ಹೆಚ್.ಎಂ ರೇವಣ್ಣ ಮಗ ಅನೂಪ್ ನಾಯಕನಾಗಿರುವ ಲಕ್ಷ್ಮಣ ಚಿತ್ರದ ನಾಯಕಿ ಯಾರೆಂಬುದನ್ನು ಜುಲೈ 7 ರಂದು ಅಧಿಕೃತವಾಗಿ ತಿಳಿಸಲಾಗುತ್ತದೆ. ಕನ್ನಡ ಹಾಗೂ ಮಲಯಾಳಂ ನ ಹಲವು ಚಿತ್ರಗಳಲ್ಲಿ ಮೇಘನಾ ರಾಜ್ ನಟಿಸಿದ್ದಾರೆ. ಪ್ರಸ್ತುತ ಕನ್ನಡ ಚಿತ್ರ ಭುಜಂಗ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಮೂಲಕ  ಜೀವಾ ಪ್ರಥಮ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಮೇಘನಾ ರಾಜ್, ಮಲಯಾಳಂ ನಲ್ಲೂ ಒಂದು ಚಿತ್ರದ ಚಿತ್ರೀಕರಣವನ್ನು ಮುಕ್ತಾಯಗೊಳಿಸಿದ್ದಾರೆ.  ಲಕ್ಷ್ಮಣ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವುದಕ್ಕೂ ಮುನ್ನ ತಮ್ಮೆಲ್ಲಾ ಚಿತ್ರೀಕರಣವನ್ನು ಮೇಘನಾ ರಾಜ್ ಮುಕ್ತಯಾಗೊಳಿಸಲಿದ್ದಾರೆ ಎಂದು ಹೇಳಲಾಗದೆ.  ಜುಲೈ ನಲ್ಲಿ ಮೇಘನಾ ರಾಜ್ ನಟಿಸಿರುವ ಆಟಗಾರ ಚಿತ್ರವೂ ತೆರೆ ಕಾಣಲಿದೆ.

Write A Comment