ಮನೋರಂಜನೆ

ಜುಲೈ 3ರಂದು ರಾಜ್ಯಾದ್ಯಂತ ‘ಆರಂಭ’ ಬಿಡುಗಡೆ

Pinterest LinkedIn Tumblr

aramba

ಬೆಂಗಳೂರು: ಸೆನ್ಸಾರ್ ಮಂಡಳಿಯಿಂದ ಆರಂಭ ಚಿತ್ರ ಯು/ಎ ಸರ್ಟಿಫಿಕೇಟ್ ತೆಗೆದುಕೊಂಡಿದ್ದು, ಜುಲೈ ೩ರಂದು ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ.

ಆರಂಭ ಚಿತ್ರ ಹಾಡುಗಳು ಹಾಗೂ ವಿಡಿಯೋ ತುಣುಕುಗಳಿಂದ ಅಂತರ್ಜಾಲದಲಿ ಭಾರೀ ಸಂಚಲನ ಉಂಟು ಮಾಡಿತ್ತು.

ಚಿತ್ರದ ಮುಖ್ಯ ಪಾತ್ರದಲ್ಲಿ ಮಿಥುನ್ ಪ್ರಕಾಶ್,ರಸಗವಳ ನಾರಾಯಣ,ಬೇಬಿ ಹಾಸಿನಿ,ಅಭಿರಾಮಿ,ರಾಜೇಗೌಡ, ಡಿಸ್ಕೊ ಪೃಥ್ವಿ,ಬಳ್ಳಾರಿ ರಾಘವೇಂದ್ರ,ಪ್ರವೀಣ್,ಬ್ಯಾಂಕ್ ಜನಾರ್ಧನ,ಪಾಂಡು ಕುಮಾರ್,ಅಭಿರಾಜ್ ಹಾಗೂ ಮತ್ತಿತರರು ಅಭಿನಯಿಸಿದ್ದಾರೆ.

ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ, ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿ, ಎಸ್. ಅಭಿ ಹನಕೆರೆ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್  ಸಂಗೀತವಿದೆ.

Write A Comment