ಮನೋರಂಜನೆ

ಸನ್ನಿ ನೋಡಿ ಸೆನ್ಸಾರ್ ಮಂಡಳಿಯೇ ಸುಸ್ತು; ‘ಮಸ್ತಿಝಾದೆ’ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ ಸೆನ್ಸಾರ್ ಮಂಡಳಿ

Pinterest LinkedIn Tumblr

1854sunny_350_100912082824

ಭಾರತದಲ್ಲಿ ಪಡ್ಡೆ ಅಭಿಮಾನಿಗಳಿಂದಲೇ ಫೇಮಸ್ ಆಗಿದ್ದಾರೆ ಸನ್ನಿ. ಅವರ ಪೂರ್ವಾಶ್ರಮದ ಛಾಯೆಯೇ ಇದಕ್ಕೆ ಪ್ಲಸ್ ಪಾಯಿಂಟ್ ಎಂಬುದನ್ನೂ ಬಿಡಿಸಿ ಹೇಳಬೇಕಿಲ್ಲ. ಆದರೆ ಈಗ್ಯಾಕೋ ಸನ್ನಿಗೆ ಮಾದಕತೆಯೇ ಮುಳುವಾದಂತಿದೆ! ಅಂತರ್ಜಾಲದಲ್ಲಿ ಅಶ್ಲೀಲ ವಿಡಿಯೋ ಛಾಪಿಸಿದ್ದಕ್ಕಾಗಿ ಇತ್ತೀಚೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಅವರು, ಮತ್ತೆ ಈಗ ಅಂಥದ್ದೇ ಫಜೀತಿಯಲ್ಲಿ ಸಿಲುಕಿದ್ದಾರೆ. ಪೋಲಿತನ ತುಸು ಜಾಸ್ತಿ ಆಯ್ತು ಅನ್ನುವ ಕಾರಣಕ್ಕೆ ಅವರ ‘ಮಸ್ತಿಝಾದೆ’ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ ಸೆನ್ಸಾರ್ ಮಂಡಳಿ.

ವಸ್ತು ವಿಷಯ ಚೆನ್ನಾಗಿಲ್ಲದಿದ್ದರೂ ಕೇವಲ ಮೈಮಾಟದಿಂದಲೇ ಪ್ರೇಕ್ಷಕರನ್ನು ಸೆಳೆಯಬಹುದು ಎಂದುಕೊಂಡಿದ್ದ ಕೆಲ ಬಾಲಿವುಡ್ ಮಂದಿಯ ಲೆಕ್ಕಾಚಾರ ತಪ್ಪಾಗಿದೆ. ಈ ಹಿಂದಿನ ಸನ್ನಿ ಅಭಿನಯದ ‘ಕುಛ್ ಕುಛ್ ಲೋಚಾ ಹೈ’ ಚಿತ್ರ ಪ್ರೇಕ್ಷಕನಿಗೆ ಅಷ್ಟಾಗಿ ಹಿಡಿಸಲಿಲ್ಲ. ಇನ್ನು ಬಿಡುಗಡೆ ಬಾಗಿಲಿಗೆ ಬಂದಿರುವ ‘ಮಸ್ತಿಝಾದೆ’ ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿಯೇ ಸುಸ್ತು ಹೊಡೆದಿದೆ. ಅಲ್ಲಿಂದ ತಿರಸ್ಕೃತಗೊಂಡು, ನಂತರ ಮರು ಪರಿಶೀಲನಾ ಸಮಿತಿ ಮತ್ತು ಮೇಲ್ಮನವಿ ಸಮಿತಿಯ ಬಾಗಿಲು ಬಡಿದಿದೆ ಚಿತ್ರತಂಡ. ಅಲ್ಲಿಯೂ ಅದೇ ರಾಗ ಅದೇ ಹಾಡು! ‘ಸ್ತ್ರೀ-ಪುರುಷರ ಅಂಗಾಂಗಗಳನ್ನು ಪ್ರದರ್ಶಿಸುವುದೇ ಈ ಚಿತ್ರದ ಪ್ರಮುಖ ಉದ್ದೇಶವಾದಂತಿದೆ. ಇದರಿಂದ ನೋಡುಗರ ಮಾನಸಿಕ ಸ್ವಾಸ್ಥ್ಯಹಾಳಾಗುತ್ತದೆ’ ಎಂಬ ಕಾರಣ ನೀಡಿದ್ದಾರೆ ಸೆನ್ಸಾರ್ ಅಧಿಕಾರಿಗಳು. ಈಗ ಕೋರ್ಟ್ ಮೆಟ್ಟಿಲೇರುವುದೊಂದೇ ಚಿತ್ರತಂಡಕ್ಕಿರುವ ಏಕೈಕ ಮಾರ್ಗ ಎನ್ನುತ್ತಿದೆ ಸಿನಿಪಂಡಿತರ ವಲಯ.

ಎಲ್ಲ ಅಂದುಕೊಂಡಂತೆಯೇ ಆಗಿದ್ದರೆ ಮೇ 1ರಂದೇ ‘ಮಸ್ತಿ..’ ತೆರೆಕಾಣಬೇಕಿತ್ತು. ಆದರೆ ಮಸ್ತಿ ಮಿತಿಮೀರಿದ್ದರಿಂದ ಬಿಡುಗಡೆ ಕಷ್ಟವಾಗಿದೆ. ಅದೇನೇ ಇರಲಿ, ಇದರಿಂದ ಪಡ್ಡೆ ಹೈಕಳು ಮಾತ್ರ ಸಿಕ್ಕಾಪಟ್ಟೆ ಬೇಸರಿಸಿಕೊಂಡಿರುವುದಂತೂ ನಿಜ. ಸನ್ನಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಮಿಲಪ್ ಜವೇರಿ ಆಕ್ಷನ್-ಕಟ್ ಹೇಳಿದ್ದಾರೆ.

Write A Comment