ಮನೋರಂಜನೆ

‘ಮೀರಾ’ ಖ್ಯಾತಿಯ ಪಾಕ್ ನಟಿ ರುಬಾಬ್ ಗೆ ಆರೆಸ್ಟ್ ವಾರೆಂಟ್

Pinterest LinkedIn Tumblr

Meera

ಲಾಹೋರ್, ಜೂ.14: ಪಾಕಿಸ್ತಾನದಲ್ಲಿ ಮನೆ ಮಾತಾಗಿರುವ ಮೀರಾ ಪಾತ್ರದ ಖ್ಯಾತ ನಟಿ ಇರ್ತಿಜ ರುಬಾಬ್ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಸುಂದರ ನಟಿ ಮೀರಾಳ ಸ್ವಯಂ ಘೋಷಿತ ಪತಿ ಅತೀಕ್‌ವರ್ ರೆಹ್ಮಾನ್ ಎಂಬುವನು ಸಲ್ಲಿಸಿರುವ ದೂರು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಮುಂದಿನ ವಿಚಾರಣೆ ವೇಳಗೆ ಮೀರಾಳನ್ನು ತಂದು ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಭಾರತದ ಬಾಲಿವುಡ್‌ನ ನಾಜರ್ ಮತ್ತು ಕಸಕ್ ನಂತಹ ಚಿತ್ರಗಳಲ್ಲೂ ನಟಿಸಿರುವ ರುಬಾಬ್ ಮೊದಲು, ನನ್ನೊಂದಿಗೆ ಮದುವೆಯಾಗಿದ್ದು, ಇದೀಗ 2013ರಲ್ಲಿ ಕ್ಯಾಪ್ಟನ್ ನವೀದ್ ಪರ್ವೇಜ್ ಎಂಬುವನೊಡನೆ ವಿವಾಹ ಒಪ್ಪಂದ ಮಾಡಿಕೊಂಡಿದ್ದಾಳೆ ಎಂದು ರೆಹ್ಮಾನ್ ನ್ಯಾಯಾಲಯದಲ್ಲಿ ರುಬಾಬ್ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಲಾಹೋರ್ ನ್ಯಾಯಾಲಯದ ನ್ಯಾಯಾಧೀಶರು ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದರೂ, ರುಬಾಬ್ ವಿಫಲಳಾದ ಹಿನ್ನೆಲೆಯಲ್ಲಿ ಈಗ ಬಂಧನ ವಾರೆಂಟ್ ಹೊರಡಿಸಿದ್ದಾರೆ. ಜು.17ಕ್ಕೆ ವಿಚಾರಣೆ ನಿಗಧಿಯಾಗಿದೆ.

Write A Comment