ಕರ್ನಾಟಕ

ಸೂಪರ್ ಮಾಮ್ ಪಟ್ಟ: ರನ್ನರ್ ಅಪ್ ಆದ ಕನ್ನಡತಿ

Pinterest LinkedIn Tumblr

Harpita

ಹರ್ಪ್ರೀತ್

ಮುಂಬೈ, ಜೂ.14: ಮುಂಬೈನಲ್ಲಿ ನಿನ್ನೆ ನಡೆದ `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೂಪರ್ ಮಾಮ್` ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯ ಫಲಿತಾಂಶ ಹೊರ ಬಿದ್ದಿದ್ದು, ಸೂಪರ್ ಮಾಮ್ ಪಟ್ಟ ಕನ್ನಡತಿ ಸೌಮ್ಯಶ್ರೀಯ ಕೈತಪ್ಪಿದ್ದು , ಅವರು ಪ್ರಥಮ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ನಿನ್ನೆ ನಡೆದ ಜೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ಡಿಐಡಿ ಸೂಪರ್ ಮಾಮ್ ಸ್ಪರ್ಧೆಯ ಫೈನಲ್, ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಕಾಯುವಂತೆ ಮಾಡಿತ್ತು. ನಾಲ್ಕು ಜನ ಅಮ್ಮಂದಿರ 12 ವಾರಗಳ ಡ್ಯಾನ್ಸಿಂಗ್ ಪರೀಕ್ಷೆಯ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ಹರ್ಪ್ರೀತ್ ಖತ್ರಿಸೂಪರ್ ಮಾಮ್ ಪಟ್ಟಧರಿಸಿದ್ದಾರೆ.

ಈ ಗ್ರ್ಯಾಂಡ್ ಫಿನಾಲೆಯಲ್ಲಿ ಸೌಮ್ಯಶ್ರೀಗೆ ಹರ್ಪ್ರೀತ್ ಖತ್ರಿ, ಸ್ನೇಹಾ ಅಡಪವಾರ್ ಮತ್ತು ದೀಪಾಶ್ರೀ ಚಟರ್ಜಿ ಟಫ್ ಕಾಂಪಿಟೇಶನ್ ನೀಡಿದ್ದರು.

ನಿನ್ನೆಯ ಗ್ರ್ಯಾಂಡ್ ಫಿನಾಲೆಗೆ ಗೋವಿಂದ್ ಮತ್ತು ಕರೀಷ್ಮಾ ಕಪೂರ್ ಜೋಡಿಯ ಡ್ಯಾನ್ಸ್ ಮೆರುಗು ನೀಡಿತ್ತು. ಇವರ ಜೊತೆ ಶ್ರದ್ಧಾ ಕಪೂರ್, ವರುಣ್ ಧವನ್ ಮತ್ತು ಸುಶಾಂತ್ ಸಿಂಗ್ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Write A Comment