ಕರಾವಳಿ

ಐಪಿಎಸ್ ಅಧಿಕಾರಿಗಳಾದ ಸುಮನ್‌ ಡಿ. ಪನ್ನೇಕ‌ರ್,  ಡಾ. ಅರುಣ್ ಕೆ. ಸಹಿತ 153 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ

Pinterest LinkedIn Tumblr

ಬೆಂಗಳೂರು: ಐವರು ಐಪಿಎಸ್ ಅಧಿಕಾರಿಗಳು ಸೇರಿದಂತೆ ರಾಜ್ಯದ 153 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗುತ್ತಿದೆ.

(ಡಾ. ಅರುಣ್ ಕೆ., ಸುಮನ್ ಪನ್ನೇಕರ್)

ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕ‌ರ್, ದ.ಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಯಾದಗಿರಿ ಜಿಲ್ಲೆಯ ಎಸ್.ಪಿ ಪೃಥ್ವಿಕ್ ಶಂಕರ್, ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಗೋಪಾಲ ಎಂ. ಬ್ಯಾಕೋಡ, ಬೆಂಗಳೂರು ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ಶ್ರೀಹರಿ ಬಾಬು ಬಿ.ಎಲ್. ಅವರಿಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.

ಹಾಸನ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ.ತಮ್ಮಯ್ಯ, ಶಿವಮೊಗ್ಗದ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್.ರಮೇಶ್ ಕುಮಾರ್, ಮಂಗಳೂರು ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ, ರಾಜ್ಯ ಗುಪ್ತದಳ ವಿಭಾಗದ ಡಿವೈಎಸ್‌ಪಿ ಆರ್.ವಾಸು, ಬೆಳಗಾವಿ ನಗರ ಮಾರುಕಟ್ಟೆ ಉಪ ವಿಭಾಗದ ಎಸಿಪಿ ಸಂತೋಷ್ ದಯಾನಂದ ಸತ್ಯನಾಯಕ್, ಬೆಂಗಳೂರಿನ ಜಯನಗರ ಉಪ ವಿಭಾಗದ ಎಸಿಪಿ ವಿ.ನಾರಾಯಣಸ್ವಾಮಿ, ವಿಜಯಪುರ ಜಿಲ್ಲೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್‌ಪಿ ತುಳಜಪ್ಪ ಸುಲ್ಪಿ, ಕೊಪ್ಪಳ ಸೈಬ‌ರ್ ಅಪರಾಧ ಪೊಲೀಸ್‌ ಠಾಣೆಯ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ್‌, ಬೆಂಗಳೂರಿನಲ್ಲಿ ಇರುವ ಸಿಐಡಿ ಡಿವೈಎಸ್‌ಪಿ ಎಂ.ಎಚ್.ಉಮೇಶ್, ಬೆಂಗಳೂರು ನಗರ ಸಂಚಾರ ಯೋಜನಾ ವಿಭಾಗದ ಎಸಿಪಿ ಜಿ.ಪ್ರಭಾಕ‌ರ್ ಸೇರಿದಂತೆ 153 ಪೊಲೀಸ್ ಅಧಿಕಾರಿಗಳಿಗೆ ಪದಕ ಲಭಿಸಿದೆ.

ಏಪ್ರಿಲ್‌ 2ರಂದು ಬೆಂಗಳೂರಿನಲ್ಲಿ ಪದಕ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Comments are closed.