ಮುಂಬೈ: ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ರನ್ನು ಮುಂಬೈನ ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಕ್ರೂಸ್ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ದಾಳಿ ನಡೆಸಿದ ವೇಳೆ ಆರ್ಯನ್ ಮತ್ತು ಟೀಂ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ಬಳಿಕ ಬಂಧಿಸಿದ್ದಾರೆ. ಈತನ್ಮದ್ಯೆ ಆರ್ಯನ್ ಪರ ಬಾಲಿವುಡ್ನ ಮತ್ತೋರ್ವ ನಟ ಸುನೀಲ್ ಶೆಟ್ಟಿ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಆರ್ಯನ್ ಇನ್ನೂ ಮಗು, ಆತನಿಗೆ ಉಸಿರಾಡಲು ಬಿಡಿ’ ಎಂದಿದ್ದಾರೆ.
ಆರ್ಯನ್ರನ್ನು ಅಧಿಕಾರಿಗಳು ವಶಕ್ಕೆ ಪಡೆದ ಮೇಲೆ ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುನೀಲ್ ಶೆಟ್ಟಿ, ‘ಎನ್ಸಿಬಿ ಅಧಿಕಾರಿಗಳು ಯಾವುದೇ ಸ್ಥಳದಲ್ಲಿ ದಾಳಿ ಮಾಡಿದಾಗ, ಮೊದಲು ಸಂಪೂರ್ಣವಾಗಿ ವಿಚಾರಣೆ ಮಾಡುತ್ತಾರೆ. ಅದೇ ರೀತಿ ಅಲ್ಲಿದ್ದ ಆರ್ಯನ್ಗೂ ವಿಚಾರಣೆ ಮಾಡುತ್ತಿದ್ದಾರೆ. ಆರ್ಯನ್ ಇನ್ನು ಮಗು. ಅವನಿಗೆ ಉಸಿರಾಡಲು ಬಿಡಿ. ಬಾಲಿವುಡ್ನಲ್ಲಿ ಏನಾದರೂ ಆಗುತ್ತಿದ್ದಂತೆಯೆ, ಮಾಧ್ಯಮಗಳೇ ತೀರ್ಪು ನೀಡಲು ಆರಂಭಿಸುತ್ತವೆ. ತನಿಖೆ ನಡೆದ ಮೇಲೆ ಸತ್ಯ ಆಚೆಗೆ ಬರಲಿ. ಅಲ್ಲಿಯವರೆಗೂ ಎಲ್ಲರೂ ಸಮಾಧಾನದಿಂದ ಇರಿ. ಆತ ಇನ್ನೂ ಮಗು. ಆತನನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ’ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಸುನೀಲ್ ಅವರ ಮಾತುಗಳಿಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಎನ್.ಡಿ.ಪಿ.ಎಸ್ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಶಾರುಖ್ ಪುತ್ರನನ್ನು ಬಂಧಿಸಲಾಗಿದೆ.
Comments are closed.