ಮುಂಬೈ

ಬಿಗ್‌ ಬಿ ರವರ 77ನೇ ಹುಟ್ಟುಹಬ್ಬಕ್ಕೆ 77 ಅಡಿಯ ವಿಶೇಷ ಕೇಕ್‌

Pinterest LinkedIn Tumblr

ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ರ 77ನೇ ಹುಟ್ಟುಹಬ್ಬಕ್ಕೆಂದು ಉದಯಪುರದಲ್ಲಿ 77 ಅಡಿಯ ವಿಶೇಷ ಕೇಕ್‌ ಕತ್ತರಿಸುವ ಮೂಲಕ ಅಭಿಮಾನಿಗಳು ಆಚರಿಸಿದ್ದಾರೆ.

ನಗರದಲ್ಲಿ ಫಿಲಂ ಸಿಟಿ ಸ್ಥಾಪಿಸಲು ಕೆಲಸ ಮಾಡುತ್ತಿರುವ ಮುಖೇಶ್ ಮಧ್ವಾನಿ ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ಸಹಸ್ರಾರು ಅಭಿಮಾನಿಗಳಿಗೆ ಆಹ್ವಾನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಬಚ್ಚನ್‌ರ ಹುಟ್ಟುಹಬ್ಬವನ್ನು ಈ ವರ್ಷ ಮತ್ತಷ್ಟು ವಿಶೇಷವಾಗಿ ಆಚರಿಸಲಾಗಿದೆ ಎಂದು ಮಧ್ವಾನಿ ತಿಳಿಸಿದ್ದಾರೆ.

Comments are closed.