ಕರ್ನಾಟಕ

ಬಿಪಿಎಲ್‌ ಕಾರ್ಡ್‌ ಮತ್ತು ಆಧಾರ್‌ ಎರಡೂ ಇದ್ದರೆ ಉಚಿತ ಚಿಕಿತ್ಸೆ ಬಗ್ಗೆ ಹೊಸದಾಗಿ ಸುತ್ತೋಲೆ.

Pinterest LinkedIn Tumblr

ಬೆಂಗಳೂರು: ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬಿಪಿಎಲ್‌ ಕಾರ್ಡ್‌ದಾರರಿಗೆ ಹೊರರೋಗಿ ವಿಭಾಗದ (ಒ‍ಪಿಡಿ) ಚಿಕಿತ್ಸೆ ಮತ್ತು ಇತರ ವೈದ್ಯಕೀಯ ತಪಾಸಣೆಗಳು ಉಚಿತವಾಗಿ ಸಿಗಲಿದೆ.

ಈ ಬಗ್ಗೆ ಇಲಾಖೆಯ ಪರಿಶೀಲನಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ. ಎನ್‌. ಅಶ್ವತ್ಥನಾರಾಯಣ ಅವರು ಈ ಸೂಚನೆ ನೀಡಿದ್ದಾರೆ ಅದರ ಅನ್ವಯ ಇಲಾಖೆಯ ಅಧಿಕಾರಿಗಳು ಬಿಪಿಎಲ್‌ ಕಾರ್ಡ್‌ದಾರಿಗೆ ಉಚಿತ ಚಿಕಿತ್ಸೆ ನೀಡುವ ಕುರಿತು ಹೊಸದಾಗಿ ಸುತ್ತೋಲೆ ಹೊರಡಿಸಿದ್ದರು.

ಇನ್ನು ಇಲ್ಲಿ ತನಕ ಬಿಪಿಎಲ್‌ ಕಾರ್ಡ್‌ದಾರರಿಗೆ ಒಪಿಡಿ ಹಾಗೂ ಎಕ್ಸ್‌ರೇ, ಸ್ಕ್ಯಾನಿಂಗ್‌ನಂತಹ ತಪಾಸಣೆಗಳಿಗೆ ಶೇ 50ರಷ್ಟು ಶುಲ್ಕ ವಿಧಿಸಲಾಗುತಿತ್ತು, ಆದರೆ ಇನ್ಮುಂದೆ ಒಳರೋಗಿಯಾಗಿ ಸೇರುವ ರೋಗಿಯ ಬಳಿ ಬಿಪಿಎಲ್‌ ಕಾರ್ಡ್‌ ಮತ್ತು ಆಧಾರ್‌ ಎರಡೂ ಇದ್ದರೆ, ಆರೋಗ್ಯ ಕರ್ನಾಟಕ ಆಯುಷ್ಮಾನ್‌ ಭಾರತ್‌ ಯೋಜನೆಯ ಅಡಿಯಲ್ಲಿ ಶೇ 94ರಷ್ಟು ವೈದ್ಯಕೀಯ ಚಿಕಿತ್ಸಾ ವೆಚ್ಚ ಕಡಿಮೆಯಾಗಲಿದೆ.

Comments are closed.