ಕರ್ನಾಟಕ

ಐಟಿ ಇಲಾಖೆ ಕಿರುಕುಳ ಆರೋಪ – ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ನೇಣಿಗೆ ಶರಣು

Pinterest LinkedIn Tumblr

ಬೆಂಗಳೂರು : ಮಾಡಿ ಡಿಸಿಎಂ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಐಟಿ ಇಲಾಖೆ ಕಿರುಕುಳದಿಂದಲೇ ರಮೇಶ್ ನೇಣಿಗೆ ಶರಣಾಗಿದ್ದಾರೆಂದು ಕುಟುಂಬಸ್ಥರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ರಮೇಶ್ ಅವರ ತಂದೆ, ತಾಯಿ, ಪತ್ನಿ , ಸಹೋದರಿ ಲಕ್ಷ್ಮೀದೇವಿ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ರಮೇಶ್ ಆತ್ಮಹತ್ಯೆಗೆ ಐಟಿ ಕಿರುಕುಳವೇ ಕಾರಣ. ಐಟಿ ಅಧಿಕಾರಿಗಳು ರಮೇಶ್ ರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಅವರಿಗೆ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸರ ಮುಂದೆ ಸಂಬಂಧಿಕರು ಹೇಳಿಕೆಕೊಟ್ಟಿದ್ದಾರೆ.

ಈ ಮಧ್ಯೆ, ನೇಣಿಗೆ ಶರಣಾದ ರಮೇಶ್ ಅವರ ಮೃತದೇಹವನ್ನು ನೋಡಲು ಕುಟುಂಬ ಸದಸ್ಯರಿಗೆ ಅವಕಾಶ ನೀಡದ ಕಾರಣ ಕೆಲಕಾಲ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಎಫ್.ಎಸ್.ಎಲ್ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳುವುದು ವಿಳಂಬವಾದ ಹಿನ್ನೆಲೆ ರಮೇಶ್ ಸಂಬಂಧಿಕರು ಆಕ್ರೋಶ ಹೊರಹಾಕಿದರು. ಅನಂತರ ಕುಟುಂಬ ಸದಸ್ಯರಿಗೆ ಮೃತದೇಹ ನೋಡಲು ಅನುಮತಿ ನೀಡಲಾಯಿತು. ಈ ನಡುವೆ, ರಮೇಶ್ ಮೃತದೇಹವನ್ನು ಮರದಿಂದ ಕೆಳಕ್ಕೆ ಇಳಿಸಲಾಗಿದ್ದು, ಸ್ಥಳದಲ್ಲಿ ಕುಟುಂಬ ಸದಸ್ಯರ ಆಕ್ರಂಧನ ಮುಗಿಲುಮುಟ್ಟಿದೆ. ಮತ್ತೊಂದೆಡೆ ಫೋರೆನ್ಸಿಕ್  ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.

ರಮೇಶ್ ಅವರು ಕಳೆದ ಎಂಟು ವರ್ಷಗಳಿಂದ ಪರಮೇಶ್ವರ್ ಅವರ ಪಿಎ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ರಮೇಶ್ ಅವರ ಅಂತ್ಯ ಕ್ರಿಯೆ ನಾಳೆ ರಾಮನಗರ ಜಿಲ್ಲೆಯ ಮೇಳೆಹಳ್ಳಿಯಲ್ಲಿ ನೆರವೇರಲಿದೆ.

Comments are closed.