ಅಂತರಾಷ್ಟ್ರೀಯ

ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು : ಅಗ್ನಿಯ ಕೆನ್ನಾಲಿಗೆಗೆ ನೂರಾರು ಮನೆಗಳು ಮತ್ತು ಕಟ್ಟಡಗಳು ಆಪೋಶನ

Pinterest LinkedIn Tumblr

ಲಾಸ್ ಏಂಜೆಲ್ಸ್: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನ ರೌದ್ರಾವತಾರದಿಂದ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ಅಗ್ನಿಯ ಕೆನ್ನಾಲಿಗೆಗೆ ನೂರಾರು ಮನೆಗಳು ಮತ್ತು ಕಟ್ಟಡಗಳನ್ನು ಆಪೋಶನ ತೆಗೆದುಕೊಂಡಿದೆ. ಬೆಂಕಿಯೊಂದಿಗೆ ಬಲವಾದ ಗಾಳಿ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಶಾಲ ಪ್ರದೇಶದವರೆಗೂ ಆವರಿಸಿರುವ ಕಾಡಿನ ಬೆಂಕಿಯನ್ನು ಶಮನಗೊಳಿಸಲು ಮತ್ತಷ್ಟು ದಿನ ಬೇಕಾಗುತ್ತದೆ ಎಂದು ಅಗ್ನಿಶಾಮಕ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ನಿನ್ನೆ ಸಂಜೆ ಬಲವಾದ ಗಾಳಿಯಿಂದಿಗೆ ಕಾಡ್ಗಿಚ್ಚು ಮತ್ತಷ್ಟು ಪ್ರದೇಶಕ್ಕೆ ಹಬ್ಬಿದ್ದು, 7,542 ಎಕರೆ ಪ್ರದೇಶಗಳು ಸುಟ್ಟು ಬೂದಿಯಾಗಿದೆ. ಸ್ಯಾನ್ ಫರ್ನಾಂಡೋ ಕಣಿವೆಯಲ್ಲಿನ ಪ್ರದೇಶಗಳು ಬೆಂಕಿಯ ರೌದ್ರಾವತಾರಕ್ಕೆ ಹೆಚ್ಚಾಗಿ ಹಾನಿಗೊಳಗಾಗಿವೆ.

ಪೋರ್ಟರ್ ರಾಂಚ್ ಪ್ರದೇಶದಲ್ಲಿ ತನ್ನ ಮನೆಯನ್ನು ಅಗ್ನಿಯ ಕೆನ್ನಾಲಿಗೆಯಿಂದ ರಕ್ಷಿಸಲು ಶ್ರಮಿಸುತ್ತಿದ್ದ 50 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಡಿನ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಸಹದ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Comments are closed.