ಮುಂಬೈ

ತಂದೆಯ ಜತೆ ಸೆಕ್ಸ್‌ ಶಂಕೆ: ಮಗಳ ಹತ್ಯೆಗೈದ ತಾಯಿ

Pinterest LinkedIn Tumblr


ನವಿಮುಂಬಯಿ: ತಂದೆಯ ಜತೆ ಲೈಂಗಿಕ ಸಂಬಂಧ ಹೊಂದಿರುವ ಅನುಮಾನದಿಂದ ತಾಯಿ ಮಗಳ ದುಪ್ಪಟಾದಿಂದ ಕತ್ತು ಬಿಗಿದು ಸಾಯಿಸಿರುವ ಪ್ರಕರಣ ಖರ್ಘರ್‌ನಲ್ಲಿ ನಡೆದಿದೆ.
ಈ ಕುಟುಂಬ ಮೂಲತಃ ರಾಜಸ್ಥಾನದ್ದು. ಆರೋಪಿ ತಾಯಿ ಗೃಹಿಣಿಯಾಗಿದ್ದು, ಆಕೆಯ ಪತಿ ಸಿವಿಲ್‌ ಗುತ್ತಿಗೆದಾರ. ಮಾರ್ಚ್‌ ನಾಲ್ಕರಂದು ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಚುಕಿರುವುದು ಪತ್ತೆಯಾದ ಬಳಿಕ ಪೊಲೀಸರು ವಿಚಾರಣೆ ನಡೆಸಿ ಸತ್ಯವನ್ನು ಬಯಲಿಗೆಳೆದಿದ್ದಾರೆ.

ಸಂತ್ರಸ್ತೆಯ ತಂದೆ ಮಧ್ಯಾಹ್ನ ಮನೆಗೆ ಬಂದಾಗ ಆಕೆ ಮಲಗಿದ್ದಳು. ಆರೋಪಿ ತಾಯಿ ಮಗಳು ಉಪವಾಸ ಮಲಗಿದ್ದಾಳೆ ಎಂದು ತಂದೆಗೆ ತಿಳಿಸಿದ್ದು, ಸಂಜೆ ವೇಳೆಗೆ ಮಗಳು ಎದ್ದೇಳುತ್ತಿಲ್ಲ ಎಂದು ಕರೆ ಮಾಡಿದ್ದಾರೆ. ತಂದೆ ಬಂದು ನೋಡಿದಾಗ ಮಗಳು ಮೃತಪಟ್ಟಿದ್ದು, ರಾಜಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.
ಮರಣೋತ್ತರ ಪರೀಕ್ಷಾ ವರದಿ ಆಧಾರದಲ್ಲಿ ಪೊಲೀಸರು ಸಂತ್ರ್ತೆಯ ಸಹಪಾಠಿಗಳ ಹೇಳಿಕೆ ಪಡೆದುಕೊಂಡಿದ್ದರು. ಆಗ ತಾಯಿಯು
ಆರು ತಿಂಗಳಿಂದ ಮಗಳಿಗೆ ಥಳಿಸುತ್ತಿದ್ದ ಮತ್ತು ತಂದೆಯ ಜತೆ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸುತ್ತಿದ್ದ ವಿಷಯ ತಿಳಿದು ಬಂದಿದೆ.

ಸಂತ್ರಸ್ತೆ ತಾಯಿಯ ಹಿಂಸೆ ತಾಳಲಾಗದೆ ಈ ಮೊದಲು ಕೂಡ ಫಿನಾಯಿಲ್‌ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದ ಮತ್ತು ಟೇರೆಸ್‌ನಿಂದ ಹಾರಿ ಸಾಯಲು ಬಯಸಿದ್ದ ವಿಷಯವೂ ಬಹಿರಂಗಗೊಂಡಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.
ಮಗಳು ನನ್ನ ಪ್ರತಿ ಮಾತಿಗೂ ಎದುರಾಡುತ್ತಿದ್ದಳು ಎಂದು ಹೇಳಿದ್ದಾರೆ.

Comments are closed.