ಮನೋರಂಜನೆ

ಶೂಟಿಂಗ್‌ಗೆ ಮರಳಿದ ಶ್ರೀದೇವಿ ಪುತ್ರಿ ಜಾಹ್ನವಿ

Pinterest LinkedIn Tumblr

01
ಶ್ರೀದೇವಿ ಪುತ್ರಿ ಜಾಹ್ನವಿ ಇದೀಗ ಚಿತ್ರೀಕರಣಕ್ಕೆ ಮರಳಿದ್ದಾರೆ. ತಾಯಿಯ ಅಕಾಲಿಕ ಸಾವು ಜಾಹ್ನವಿಯನ್ನಷ್ಟೇ ಅಲ್ಲ ಶ್ರೀದೇವಿ ಅಭಿಮಾನಿಗಳನ್ನೂ ಕಂಗೆಡಿಸಿತ್ತು. ಇದೀಗ ಅವರು ಆ ದುಃಖದಿಂದ ಹೊರಬಂದಿದ್ದು ಚಿತ್ರೀಕರಣಕ್ಕೆ ಹಾಜರಾಗುವ ಮೂಲಕ ಚಿತ್ರತಂಡದಲ್ಲಿ ಹೊಸ ಸ್ಫೂರ್ತಿ ತಂದಿದ್ದಾರೆ.
ಜಾಹ್ನವಿ ಕಪೂರ್
ಶಶಾಂಕ್ ಖೈತಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ದಢಕ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಇಶಾನ್ ಖತ್ತೇರ್ ನಾಯಕ ನಟರಾಗಿದ್ದಾರೆ. ಜೀ ಸ್ಟುಡಿಯೋದ ಧರ್ಮ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಇದೀಗ ಕೋಲ್ಕತಾದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ದಢಕ್ ಚಿತ್ರೀಕರಣ
ಕೋಲ್ಕತ್ತಾದ ಗಣೇಶ್ ಚಂದ್ರ ಅವೆನ್ಯೂ ಬಳಿ ಚಿತ್ರೀಕರಣ ನಡೆಸಲಾಯಿತು. ಅದಾದ ಬಳಿಕ ರಾಯಲ್ ಕಲ್ಕತ್ತಾ ಗಾಲ್ಫ್ ಕ್ಲಬ್ ಬಳಿ ಚಿತ್ರೀಕರಿಸಿಕೊಳ್ಳಲಾಯಿತು. ಕಲ್ಕತ್ತಾದ ಸಾಂಸ್ಕೃತಿಕ ಸ್ಥಳಗಳಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ. ಹೌರಾ ಅಣೆಕಟ್ಟು, ವಿಕ್ಟೋರಿಯಾ ಸ್ಮಾರಕ, ಪ್ರಿನ್ಸೆಪ್ ಘಾಟ್, ನ್ಯೂ ಮಾರ್ಕೆಟ್ ಏರಿಯಾದಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ.
ಚಿತ್ರೀಕರಣದಲ್ಲಿ ಜಾಹ್ನವಿ
ಆದರೆ ಚಿತ್ರೀಕರಣದ ಬಗ್ಗೆ ಕೋಲ್ಕತ್ತಾ ಜನ ಅಷ್ಟಾಗಿ ಆಸಕ್ತಿ ತೋರಿಸಿಲ್ಲ. ಬಹುಶಃ ಜಾಹ್ನವಿ ಜನಪ್ರಿಯ ಕಲಾವಿದೆ ಅಲ್ಲ ಎಂಬ ಕಾರಣಕ್ಕಿರಬಹುದು. ಮರಾಠಿ ಭಾಷೆಯಲ್ಲಿ ಯಶಸ್ವಿಯಾದ ‘ಸೈರಾಟ್’ ಸಿನಿಮಾದ ರೀಮೇಕ್ ಆಗಿರುವ ‘ದಢಕ್’ಗೆ ಬದ್ರಿನಾಥ್ ಕಿ ದುಲ್ಹನಿಯಾ ಖ್ಯಾತಿಯ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಿರುವುದು ಪ್ಲಸ್ ಪಾಯಿಂಟ್ ಎನ್ನಬಹುದು.

Comments are closed.