ಕರಾವಳಿ

ಮಾ.24 : ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮುಂಬಯಿ ಸಂಸದ ಗೋಪಾಲ ಶೆಟ್ಟಿ ಮಂಗಳೂರಿಗೆ.

Pinterest LinkedIn Tumblr

ಮಂಗಳೂರು : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ತಯಾರಿ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಮುಂಬಯಿ ಸಂಸದರಾದ ಶ್ರೀ ಗೋಪಾಲ್ ಶೆಟ್ಟಿಯವರು ಭೇಟಿ ನೀಡಲಿರುವರು.

ತಾರೀಕು 24/03/2018 ಶನಿವಾರದಂದು ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್‌ರವರು ಬೆಳಿಗ್ಗೆ 11 ಗಂಟೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಧರ್ಮಸ್ಥಳ ಹಾಲ್‌ನಲ್ಲಿ ಮತ್ತು ಸಂಜೆ 3 ಗಂಟೆಗೆ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಬಿಲ್ಲವ ಸಭಾಂಗಣದಲ್ಲಿ ಹಾಗೂ 25/03/2018 ರಂದು ಪೂರ್ವಹ್ನ 10.30ಗಂಟೆಗೆ ಉತ್ತರ ವಿಧಾನಸಭಾ ಕ್ಷೇತ್ರದ ಕಾವೂರಿನ ಸೊಸೈಟಿ ಹಾಲ್‌ನಲ್ಲಿ ಮತ್ತು ಸಂಜೆ 3  ಗಂಟೆಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆನರಾ ಹೈಸ್ಕೂಲಿನ ಸುಧೀಂದ್ರ ಸಭಾಭವನದಲ್ಲಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು.

ಮುಂಬಯಿ ಸಂಸದ ಶ್ರೀ ಗೋಪಾಲ್ ಶೆಟ್ಟಿಯವರು ತಾರೀಕು 24/03/2018 ಶನಿವಾರ ಪೂರ್ವಹ್ನ 11 ಗಂಟೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಎಮ್ನೂರಿನ ಭಜನಾ ಮಂದಿರದ ಸಭಾಂಗಣದಲ್ಲಿ ಮತ್ತು 3 ಗಂಟೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಟೌನ್ ಬ್ಯಾಂಕ್ ಹಾಲ್ ಸಭಾಂಗಣದಲ್ಲಿ ಹಾಗೂ ತಾರೀಕು 25/03/2018 ರಂದು ಪೂರ್ವಹ್ನ 10 ಗಂಟೆಗೆ ಮಂಗಳೂರು ವಿಧಾನಸಭಾ ಕ್ಷೇತ್ರದ ಸೌಭಾಗ್ಯ ಸದನ ಕೊಲ್ಯದಲ್ಲಿ ಮತ್ತು ಅಪರಾಹ್ನ 2 ಗಂಟೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ.ಸಿ ರೋಡ್‌ನ ರಂಗೋಲಿ ಹಾಲ್‌ನಲ್ಲಿ ಪ್ರಮುಖ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿರುವರು ಎಂದು ದ.ಕ ಜಿಲ್ಲಾ ಚುನಾವಣಾ ಸಂಚಾಲಕರಾದ ಶ್ರೀ ಕೆ. ಮೋನಪ್ಪ ಭಂಡಾರಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Comments are closed.