ಮುಂಬೈ

ಭಾರಿ ಮಳೆಗೆ ಗಿಳಿಗಳ ಮಾರಣಹೋಮ

Pinterest LinkedIn Tumblr


ಮುಂಬಯಿ: ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಸುಮಾರು 450ಕ್ಕೂ ಹೆಚ್ಚು ಗಿಳಿಗಳು ಸಾವನ್ನಪ್ಪಿವೆ. ಪ್ಯಾರಾಕೀಟ್ಸ್‌ ಎನ್ನಲಾಗುವ ಈ ಗಿಳಿಗಳು ಸಣ್ಣ ಗಾತ್ರದವುಗಳಾಗಿದ್ದು, ಈಗಾಗಲೇ ಅಳಿವಿನಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.

ಮಹಾರಾಷ್ಟ್ರದ ಬಾಂದ್ರಾ ಜಿಲ್ಲೆಯ ತುಮ್ಸಾರ್‌ನಲ್ಲಿ ಬುಧವಾರ ರಾತ್ರಿ 8 ಗಂಟೆಯಿಂದ 8.30ರ ವರೆಗೆ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಆಲದ ಮರದಲ್ಲಿ ಗೂಡು ಕಟ್ಟಿಕೊಂಡಿದ್ದ ಗಿಳಿಗಳು ಸಾಮೂಹಿಕ ಸಾವಿಗೆ ತುತ್ತಾಗಿವೆ.

ಮರದ ಸುತ್ತಲೂ ಸತ್ತು ಬಿದ್ದಿದ್ದ ರಾಶಿ ಗಿಳಿಗಳು ಮನ ಕಲಕುತ್ತಿದ್ದವು. ತುಮ್ಸಾರ್‌ನಲ್ಲಿ ಕಳೆದ 3 ದಿನಗಳಿಂದ ಆಲಿಕಲ್ಲು ಸಹಿತ ಮಳೆ ಸುರಿಯುತ್ತಿದೆ.

ಗೊಂಡಿಯಾ ಜಿಲ್ಲೆಯ ಗೊರೆಗಾಂವ್‌ನಲ್ಲು ಇಂತಹದ್ದೇ ಹಕ್ಕಿಗಳ ಸಾವಿನ ಘಟನೆ ವರದಿಯಾಗಿದೆ. ಗಿಳಿಗಳ ಜತೆಗೆ ಪಾರಿವಾಳ, ಮಡಿವಾಳ ಹಕ್ಕಿಗಳು ಸಾವನ್ನಪ್ಪಿವೆ.

Comments are closed.