
ಬೆಂಗಳೂರು: ಬಂಜಾರ ಸಮುದಾಯದ ನಾಯಕಿಯೊಬ್ಬರು ಬಿಜೆಪಿ ರಾಜ್ಯಾಧ್ಯಕ್ಷ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲೇ ‘ಶೋಭಾ ಕರಂದ್ಲಾಜೆ ಅವರು ಮುಂದಿನ ಸಿಎಂ ಆಗಲಿ’ ಎಂದಿರುವ ಸ್ವಾರಸ್ಯಕರ ಘಟನೆ ಗುರುವಾರ ನಡೆದಿದೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸೇವಾಲಾಲ್ ದಿನಾಚರಣೆಯಲ್ಲಿ ಮಾತನಾಡಿದ ನಾಯಕಿ ‘ನಮ್ಮ ಸಮುದಾಯದ ಕಳಕಳಿಯ ವಿನಂತಿಯೆಂದರೆ ಶೋಭಾ ಅವರು ಮುಂದಿನ ಮುಖ್ಯಮಂತ್ರಿಯಾಗಲಿ.ಇದಕ್ಕೆ ನಮ್ಮ ಆಶೀರ್ವಾದ ಇದೆ’ ಎಂದರು.
ವೇದಿಕೆಯಲ್ಲಿದ್ದ ಶೋಭಾ ಅವರು ನಗುನಗುತ್ತಾ ಯಡಿಯೂರಪ್ಪ ಅವರು ಮಾತನಾಡುತ್ತಾರೆ ಎಂದರು. ಇದಕ್ಕೆ ನಗುನಗುತ್ತಾ ಉತ್ತರ ನೀಡಿದ ಯಡಿಯೂರಪ್ಪ ‘ಶೋಭಾ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ತಪ್ಪು ಮಾಡಿದೆ’ ಎಂದರು
-ಉದಯವಾಣಿ
Comments are closed.