ಗದಗ: ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದ ಮಂಗವೊಂದರ ಮರಿ ಚೀರಾಡುತ್ತ, ತಾಯಿಯನ್ನು ಅಪ್ಪಿಕೊಂಡು ಮಮತೆಯ ಮಡಿಲಿಗೆ ಮೊರೆ ಇಟ್ಟಿದ್ದು ನೆರೆದವರ ಮನಕಲಕುವಂತೆ ಮಾಡಿತು.
ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕಾದ ಬಳಿ ಬುಧವಾರ ವಿದ್ಯುತ್ ಸ್ಪರ್ಶದಿಂದ ಕೋತಿಯೊಂದು ಮೃತಪಟ್ಟಿದೆ.
ಮೃತ ಮಂಗನ ಮರಿಯ ಆರ್ತನಾದ ಕಂಡ ಜನತೆ ಅದನ್ನು ಸಂತೈಸಲು ನಿಪ್ಪಲ್ ಬಾಟಲಿಯಲ್ಲಿ ಹಾಲು ಹಾಗೂ ಹಣ್ಣು ನೀಡಿದ್ದಾರೆ. ಯಾವುದರ ಗೊಡವೆಗೆ ಹೋಗದ ಮರಿ ತಾಯಿಯ ಪ್ರೀತಿಯ ಅಪ್ಪುಗೆಗೆ ಹಂಬಲಿಸಿತು.
ಕೊನೆಗೆ ತಾಯಿಯ ಶವದಿಂದ ಮರಿಯನ್ನು ಎತ್ತಿಕೊಂಡು ಸಂತೈಸಿ ಮಂಗನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.