ಮುಂಬೈ

ಮುಂದುವರಿದ ವಿಶ್ವ ಶೇರು ತಲ್ಲಣ: ಸೆನ್ಸೆಕ್ಸ್‌ 407 ಅಂಕ ಕುಸಿತ

Pinterest LinkedIn Tumblr


ಮುಂಬಯಿ: ವಿಶ್ವ ಶೇರು ಮಾರುಕಟ್ಟೆಯಲ್ಲಿನ ತಲ್ಲಣ ಮುಂದುವರಿದಿದೆ. ಅಮೆರಿಕ ಶೇರು ಮಾರುಕಟ್ಟೆಗಳು ಇದಕ್ಕೆ ನೇತೃತ್ವ ವಹಿಸಿವೆ. ಇವುಗಳನ್ನು ಅನುಸಿರಿಸಿರುವ ಮುಂಬಯಿ ಶೇರು ಪೇಟೆ ಇಂದು ಶುಕ್ರವಾರದ ವಹಿವಾಟನ್ನು 407 ಅಂಕಗಳ ನಷ್ಟದೊಂದಿಗೆ 34,005.76 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,500 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಜಾರಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕಿನ ಬಡ್ಡಿ ದರದ ಗುಮ್ಮ ಇದೀಗ ಮತ್ತೆ ಜಾಗತಿಕ ಶೇರು ಮಾರುಕಟ್ಟೆಗಳನ್ನು ಕಾಡತೊಡಗಿದೆ.

ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್‌ ಈ ವಾರಾಂತ್ಯ ಒಟ್ಟು 1,060.99 ಅಂಕಗಳ ನಷ್ಟಕ್ಕೆ ಗುರಿಯಾಗಿದೆ. ನಿಫ್ಟಿ 305.65 ಅಂಕಗಳ ನಷ್ಟಕ್ಕೆ ಗುರಿಯಾಗಿದೆ.

ಸೆನ್ಸೆಕ್ಸ್‌ ಕೆಲ ದಿನಗಳ ಹಿಂದಷ್ಟೇ ಎಂದರೆ ಜನವರಿ 29ರಂದು ತನ್ನ ಜೀವಮಾನದ ಎತ್ತರವಾಗಿ 36,443.98 ಅಂಕಗಳ ಮಟ್ಟಕ್ಕೆ ಏರಿತ್ತು. ಅಲ್ಲಿ ಬಳಿಕ ಅದು 2,438.22 ಅಂಕಗಳನ್ನು ಕಳೆದುಕೊಂಡಿದೆ.

-ಉದಯವಾಣಿ

Comments are closed.