ಮುಂಬೈ

ಪೀಟರ್ ಮುಖರ್ಜಿಗೆ ವಿಚ್ಛೇದನಕ್ಕೆ ನಿರ್ಧರಿಸಿದ ಇಂದ್ರಾಣಿ ಮುಖರ್ಜಿ

Pinterest LinkedIn Tumblr


ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ತನಿಖೆ ನಡೆಸಿ ವಿಶೇಷ ಸಿಬಿಐ ಇಂದ್ರಾಣಿ ಮುಖರ್ಜಿ, ಆಕೆಯ ಪತಿ ಪೀಟರ್‌ ಮುಖರ್ಜಿ ಮತ್ತು ಮಾಜಿ ಪತಿ ಸಂಜೀವ್‌ ಖನ್ನಾ ವಿರುದ್ದ ಕೊಲೆ ಕೃತ್ಯದ ದೋಷಾರೋಪವನ್ನು ಮಾಡಿದೆ.

ಮೂವರೂ ಆರೋಪಿಗಳ ವಿರುದ್ಧ ವಿಶೇಷ ಸಿಬಿಐ, ಕ್ರಿಮಿನಲ್‌ ಸಂಚು ಮತ್ತು ಕೊಲೆ ಆರೋಪವನ್ನು ಹೊರಿಸಿದ್ದು, ಮುಂದಿನ ತಿಂಗಳು ಫೆ.1ರಿಂದ ಪ್ರಕರಣದ ವಿಚಾರಣೆ ಆರಂಭವಾಗಲಿದೆ.

ಏತನ್ಮಧ್ಯೆ, ನಾನು ನನ್ನ ಪತಿ ಪೀಟರ್ ಮುಖರ್ಜಿಗೆ ವಿವಾಹ ವಿಚ್ಛೇದನ ನೀಡಲು ಬಯಸುತ್ತೇನೆ. ಅದಕ್ಕಾಗಿ ವಿಚ್ಛೇದನ ಮನವಿ ನೀಡಲು ನನಗೆ ಅವಕಾಶ ಕೊಡಿ ಎಂದು ಇಂದ್ರಾಣಿ ನ್ಯಾಯಾಲಯದಲ್ಲಿ ಹೇಳಿದ್ದಾರೆ.

2012 ಏಪ್ರಿಲ್ 24ರಂದು ಶೀನಾ ಕೊಲೆ ನಡೆದಿತ್ತು. ಈ ಕೊಲೆ ಪ್ರಕರಣದ ಮೂವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120(ಬಿ) (ಕ್ರಿಮಿನಲ್‌ ಸಂಚು). ಸೆಕ್ಷನ್ 34 (ಸಮಾನ ಉದ್ದೇಶದೊಂದಿಗೆ ಹಲವು ವ್ಯಕ್ತಿಗಳಿಂದ ಕೃತ್ಯ) ಸೆಕ್ಷನ್203 (ಅಪರಾಧಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡುವುದು), ಸೆಕ್ಷನ್364 (ಅಪಹರಣ), ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಪ್ರಕಾರ ದೋಷಾರೋಪ ಹೊರಿಸಲಾಗಿದೆ.

ಇದರ ಜತೆಗೆ ಇಂದ್ರಾಣಿ ಮತ್ತು ಸಂಜೀವ್‌ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 (ಕೊಲೆ ಯತ್ನ), ಸೆಕ್ಷನ್ 120 ಬಿ (ಕ್ರಿಮಿನಲ್‌ ಸಂಚು) ದೋಷಾರೋಪ ಹೊರಿಸಲಾಗಿದೆ.

Comments are closed.