ರಾಷ್ಟ್ರೀಯ

‘ದಂಗಲ್’ ನಟಿ ಝೈರಾಗೆ ಅಮೀರ್ ಖಾನ್ ಬೆಂಬಲ ಎಂದಿದ್ದು ಯಾಕೆ ಗೊತ್ತಾ?

Pinterest LinkedIn Tumblr


ನವದೆಹಲಿ: ‘ದಂಗಲ್‌’ ಚಿತ್ರದ ನಟಿ ಝೈರಾ ವಾಸಿಮ್ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ನಟ ಅಮೀರ್ ಖಾನ್ ಆಕೆಯ ಬೆಂಬಲಕ್ಕೆ ನಿಂತಿದ್ದಾರೆ.

16 ವರ್ಷ ವಯಸ್ಸಿನ ಝೈರಾ ಕಾಶ್ಮೀರ ಮೂಲದವಳು. ಇವರು ತಂದೆ – ತಾಯಿ ಜತೆ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಳು. ಈ ವೇಳೆ ಶಿಕ್ಷಣ, ಉದ್ಯೋಗ, ದಂಗಲ್ ಚಿತ್ರೀಕರಣದ ಅನುಭವವನ್ನು ಜೊತೆ ಹಂಚಿಕೊಂಡಿದ್ದಳು. ಝೈರಾ ಮುಫ್ತಿಯವರನ್ನು ಭೇಟಿ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಆನ್‍ಲೈನ್‍ಲ್ಲಿ ಆಕೆಗೆ ಬೆದರಿಕೆಗಳನ್ನೂ ಒಡ್ಡಲಾಗಿತ್ತು.

ಆಕ್ಷೇಪಗಳು ವ್ಯಕ್ತವಾಗುತ್ತಿದ್ದಂತೆ ಝೈರಾ,‘ನನ್ನ ಇತ್ತೀಚಿನ ನಡವಳಿಕೆಯಿಂದ ಹಲವರು ಅಸಮಾಧಾನಗೊಂಡಿರುವುದು ನನಗೆ ತಿಳಿದಿದೆ. ಉದ್ದೇಶಪೂರ್ವಕವಾಗಿ ಯಾರಿಗೂ ನೋವುಂಟುಮಾಡಿಲ್ಲ. ನನ್ನ ನಡೆಯಿಂದಾಗಿ ನೋವಾದರೆ ಕ್ಷಮೆ ಕೋರುತ್ತಿದ್ದೇನೆ. ಕಳೆದ ಆರು ತಿಂಗಳುಗಳಲ್ಲಿ ನಡೆದ ಘಟನಾವಳಿಗಳು, ಜನರ ಭಾವನೆಗಳು ನನಗೆ ಅರ್ಥವಾಗುತ್ತವೆ. ದಯವಿಟ್ಟು ನನ್ನನ್ನು ಮನ್ನಿಸಿ’ ಎಂದು ಫೇಸ್‌ಬುಕ್ ಸಂದೇಶದಲ್ಲಿ ಝೈರಾ ಉಲ್ಲೇಖಿಸಿದ್ದಾಳೆ. ‘ನಾನು ಮಾದರಿಯಲ್ಲ. ನನ್ನನ್ನು ಯಾರೂ ಅನುಸರಿಸುವುದು ಬೇಡ’ ಎಂದೂ ಕ್ಷಮೆಯಾಚಿಸಿ ಸಂದೇಶ ಪ್ರಕಟಿಸಿ ಅದನ್ನು ಅಳಿಸಿ ಹಾಕಿದ್ದಳು.

ಮೊದಲಿನ ಸಂದೇಶವನ್ನು ಅಳಿಸಿಹಾಕಿದ ಕೆಲವೇ ಗಂಟೆಗಳಲ್ಲಿ ಝೈರಾ ಮತ್ತೊಂದು ಸಂದೇಶ ಪ್ರಕಟಿಸಿದಳು. ‘ವಿಷಯ ವಿವಾದ ಸೃಷ್ಟಿಸಬಹುದು ಎಂದು ಅಂದುಕೊಂಡಿರಲಿಲ್ಲ. ಯಾರೂ ಯಾವುದಕ್ಕೂ ನನ್ನ ಮೇಲೆ ಒತ್ತಡ ಹೇರಿಲ್ಲ. ಇದಕ್ಕೆ ಇನ್ನಷ್ಟು ಪ್ರಚಾರ ನೀಡಬೇಡಿ’ ಎಂದು ಮಾಧ್ಯಮದವರಿಗೆ ಮನವಿ ಮಾಡಿದ್ದಾಳೆ. ನಂತರ ಈ ಸಂದೇಶವನ್ನೂ ಅಳಿಸಿಹಾಕಿದ್ದಾಳೆ.

ಈ ಎಲ್ಲ ವಿದ್ಯಮಾನಗಳಿಂದಾಗಿ ಹೆದರಿರುವ ಝೈರಾಗೆ ನಟ ಅಮೀರ್ ಖಾನ್ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.

ಅಮೀರ್ ಟ್ವೀಟ್‍ನಲ್ಲಿ ಏನಿದೆ?
ನಾನು ಝೈರಾಳ ಹೇಳಿಕೆ ಓದಿದೆ. ಈ ರೀತಿ ಆಕೆ ಹೇಳಿಕೆ ನೀಡಲು ಕಾರಣ ಏನೆಂಬುದನ್ನೂ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಝೈರಾ, ನಿನ್ನಂತ ಯುವ ಪ್ರತಿಭೆ, ಕಠಿಣ ಪರಿಶ್ರಮ ಹಾಗೂ ಧೈರ್ಯವಂತೆ ಎಲ್ಲ ದೇಶದಲ್ಲಿರುವ ಎಲ್ಲ ಮಕ್ಕಳಿಗೆ ಮಾತ್ರವಲ್ಲ ಜಗತ್ತಿಗೇ ಮಾದರಿ. ನೀನು ನನಗೇ ಮಾದರಿ, ದೇವರು ಒಳ್ಳೆಯದು ಮಾಡಲಿ.
ಪ್ರೀತಿಯಿಂದ,
ಅಮೀರ್
ವಿ.ಸೂ: ಜೀವನದಲ್ಲಿ ಸಾಧನೆ ಮಾಡಲು ಪರಿಶ್ರಮ ಪಡುತ್ತಿರುವ ಆಕೆಗೆ ಇನ್ನೂ 16ರ ಹರೆಯ. ಆಕೆಯನ್ನು ಅವಳ ಪಾಡಿಗೆ ಬಿಟ್ಟು ಬಿಡಿ. ನಿಮ್ಮಲ್ಲಿ ನಾನು ಮನವಿ ಮಾಡುತ್ತಿದ್ದೇನೆ ಎಂದು ಅಮೀರ್ ಟ್ವೀಟ್ ಮಾಡಿದ್ದಾರೆ.

Aamir Khan ✔ @aamir_khan
12:08 PM – 17 Jan 2017
4,133 4,133 Retweets 11,854 11,854 likes
ಕುಸ್ತಿಪಟು ಮಹಾವೀರ ಸಿಂಗ್ ಪೋಗಟ್ ಅವರು ತಮ್ಮ ಮಕ್ಕಳನ್ನು ಶ್ರೇಷ್ಠ ಕುಸ್ತಿಪಟುಗಳನ್ನಾಗಿ ರೂಪುಗೊಳಿಸಿದ ಕಥಾವಸ್ತುವನ್ನೊಳಗೊಂಡ, ಅಮೀರ್ ಖಾನ್ ನಾಯಕ ನಟನಾಗಿರುವ ‘ದಂಗಲ್’ ಚಿತ್ರದಲ್ಲಿ ಝೈರಾ ನಟಿಸಿದ್ದಾಳೆ. ಕುಸ್ತಿಪಟು ಗೀತಾ ಪೋಗಟ್ ಅವರ ಬಾಲ್ಯಕಾಲದ ಪಾತ್ರವನ್ನು ಝೈರಾ ನಿರ್ವಹಿಸಿದ್ದಾಳೆ.

Comments are closed.