ಕರ್ನಾಟಕ

ಯುವತಿಯಿಂದಲೇ ಯುವಕನ ಮೇಲೆ ಆಸಿಡ್ ದಾಳಿ

Pinterest LinkedIn Tumblr


ಬೆಂಗಳೂರು(ಜ.17): ಮದುವೆಗೆ ನಿರಾಕರಿಸಿದ ಯುವಕನ ಮೇಲೆ ಯುವತಿಯೇ ಆಸಿಡ್ ದಾಳಿ ನಡೆಸಿರುವ ಘಟನೆ ವಿಜಯನಗರದ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ.
ಆಸಿಡ್​ ದಾಳಿ ಮಾಡಿದ ಯುವತಿಯನ್ನ ವಿದ್ಯಾ ಎಂದು ಗುರ್ತಿಸಲಾಗಿದ್ದು, ಗಾಯಾಳು ಯುವಕ ವಿಜಯಕುಮಾರ್​`ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕ್ಟಿವ್ ಹೋಂಡಾದಲ್ಲಿ ಬಂದು ಆಸಿಡ್ ಹಾಕಿ ಪರಾರಿಯಾಗಲು ಯತ್ನಿಸಿದ ಯುವತಿಯನ್ನು ಜನರು ಹಿಡಿದಿದ್ದಾರೆ.

Comments are closed.