ಮುಂಬೈ

ಪುಟ್ಟ ಬಾಲಕಿಯ ಮೇಲೆ ಗ್ಯಾಂಗ್‌ ರೇಪ್‌ ಮಾಡಿದ ಬಾಲಕರ ಬಂಧನ

Pinterest LinkedIn Tumblr

rape-minor

ಪುಣೆ: ನಗರದ ಪಿಂಪ್ರಿ ಪ್ರದೇಶದಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ರಿಂದ 14 ವರ್ಷ ವಯಸ್ಸಿನ ನಾಲ್ವರು ಅಪ್ರಾಪ್ತ ವಯಸ್ಕ ಬಾಲಕರನ್ನು ಪುಣೆ ಪೊಲೀಸರು ರವಿವಾರ ಬಂಧಿಸಿದ್ದಾರೆ.

ಅಣ್ಣಾ ಸಾಹೇಬ್‌ ಮಗರ್‌ ಸ್ಲಮ್‌ನ ನಿವಾಸಿಗಳಾಗಿರುವ ಈ ನಾಲ್ವರು ಬಾಲಕರು ಶನಿವಾರ ಪಿಂಪ್ರಿ ಪ್ರದೇಶದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪಿಂಪ್ರಿ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅತ್ಯಾಚಾರದಿಂದ ಆಘಾತ ಕ್ಕೊಳಗಾದ ಬಾಲಕಿ ತನ್ನ ತಾಯಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದು, ಅನಂತರ ಆಕೆಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಐಪಿಸಿ ಮತ್ತು ಪೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಬಾಲಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Comments are closed.